ದಕ್ಷಿಣ ಕನ್ನಡ: ನಾಳೆ ವಿವಿಧೆಡೆ ಕೋವಿಡ್ ಲಸಿಕಾ ಶಿಬಿರ | ಒಂದೇ ದಿನದಲ್ಲಿ 50 ಸಾವಿರ ಲಸಿಕೆ ನೀಡುವ ಗುರಿ

Prasthutha|

ಮಂಗಳೂರು: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆ. 18ರ ಬುಧವಾರ ಕೋವಿಡ್ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ನಾಳೆ ಒಂದೇ ದಿನ 50 ಸಾವಿರಕ್ಕಿಂತ ಹೆಚ್ಚಿನ ಕೋವಿಡ್ ವ್ಯಾಕ್ಸಿನ್ ನೀಡುವ ಗುರಿಯನ್ನ ಜಿಲ್ಲಾಡಳಿತ ಹೊಂದಿದೆ.

- Advertisement -

ನಗರದ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನೇ ಡೋಸ್ ಹಾಗೂ ಕದ್ರಿ ಶಿವಭಾಗ್ ಇ.ಎಸ್.ಐ ಹಾಗೂ ಬೈಕಂಪಾಡಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಎರಡನೇ ಡೋಸ್ ಮತ್ತು NRI ಫಲಾನುಭವಿಗಳಿಗೆ ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಯು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ.

ಮಂಗಳೂರು ತಾಲೂಕಿನ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿರುವ ಕೋವಿಡ್ ಲಸಿಕಾ ಶಿಬಿರದಲ್ಲಿ ಮೊದಲ ಮತ್ತು ಎರಡನೇ ಡೋಸ್‌ ನೀಡಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ. ಅಲ್ಲದೇ, ಪ್ರಮುಖವಾಗಿ ನಾಳೆ ಉರ್ವದ ಲೇಡಿಹಿಲ್ ಕುದ್ಮುಲ್ ರಂಗರಾವ್ ಹಾಲ್, ಸರಕಾರಿ ಪ್ರಾಥಮಿಕ ಶಾಲೆ ಮಣ್ಣಗುಡ್ಡೆ, ನಾರಾಯಣ ಗುರು ಹಾಲ್ ಚಿಲಿಂಬಿ, ಶಿವಶಕ್ತಿ ಕ್ಲಬ್ ಹಾಲ್ ಕುದ್ರೋಳಿ, ಅಂಬಾಭವಾನಿ ಹಾಲ್ ಜಲ್ಲಿಗುಡ್ಡೆ, ಗಣೇಶೋತ್ಸವ ಹಾಲ್ ಪಂಪವೆಲ್, ಆನಂದ ರೆಸಿಡೆನ್ಸಿ ಹಾಲ್ ಮರೋಳಿ, ಶಾರದೋತ್ಸವ ಟ್ರಸ್ಟ್ ಹಾಲ್ ವಿದ್ಯಾನಗರ ಕೂಳೂರು, ಸರಕಾರಿ ಪ್ರಾಥಮಿಕ ಶಾಲೆ ಕಾವೂರು, ಕೃಷ್ಣ ನಗರ ಅಂಗನವಾಡಿ ಕೂಳೂರು, ಸರಕಾರಿ ಪ್ರಾಥಮಿಕ ಶಾಲೆ ಪೆರ್ಮುದೆ, ಸರಕಾರಿ ಪ್ರಾಥಮಿಕ ಶಾಲೆ ಬೈಕಂಪಾಡಿ ಮುಂತಾದೆಡೆ ಶಿಬಿರ ನಡೆಯಲಿದ್ದು ಲಸಿಕೆ ಲಭ್ಯವಿರಲಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 3.8ರಷ್ಟು ಕೋವಿಡ್ ಪಾಸಿಟಿವಿಟಿ ದರವಿದ್ದು, ಸೋಂಕಿನಿಂದ ಹೆಚ್ಚಿನ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಈ ಮೂಲಕ ಮತ್ತಷ್ಟು ವೇಗ ನೀಡಿದೆ.

ಸರಕಾರಿ ಆಸ್ಪತ್ರೆ, ಶಿಬಿರಗಳಲ್ಲದೇ ನಿಗದಿಪಡಿಸಿದ ದರಗಳಂತೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ಲಸಿಕೆ ಲಭ್ಯವಿರುವುದಾಗಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.



Join Whatsapp