ಪೆಗಾಸೆಸ್ ಕಣ್ಗಾವಲು ಸೈಬರ್ ಭಯೋತ್ಪಾದನೆಯ ಪ್ರತಿರೂಪ: ಪ್ರತ್ಯೇಕ ತನಿಖೆ ಕೋರಿ ಸುಪ್ರೀಂ ಮೊರೆ ಹೋದ ಮಾಜಿ ಆರೆಸ್ಸೆಸ್ ನಾಯಕ

Prasthutha|

ನವದೆಹಲಿ: ಪೆಗಾಸೆಸ್ ಕದ್ದಾಲಿಕೆಯು ಪ್ರಸಕ್ತ ದೇಶ ಕಂಡ ಗಂಭೀರ ಸಮಸ್ಯೆಯಾಗಿದೆಯೆಂದು ಮಾಜಿ ಆರೆಸ್ಸೆಸ್ ಪ್ರಚಾರಕ ಕೆ. ಗೋವಿಂದಾಚಾರ್ಯ ಆರೋಪಿಸಿದ್ದಾರೆ.

- Advertisement -

ಪೆಗಾಸೆಸ್ ಕಣ್ಗಾವಲು ಹಗರಣವನ್ನು ಸುಪ್ರೀಮ್ ಕೋರ್ಟ್ ನಿಂದ ಪ್ರತ್ಯೇಕವಾಗಿ ತನಿಖೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಮೇಲಿನಂತೆ ಆರೋಪಿಸಿದ್ದಾರೆ.

ಸರ್ಕಾರ ಪೆಗಾಸೆಸ್ ಸ್ಪೈವೇರ್ ಮೂಲಕ ನಡೆಸಿದ ಕದ್ದಾಲಿಕೆಯು ಸಾಮಾನ್ಯ ವ್ಯಕ್ತಿ ಜೀವನ ಮತ್ತು ಸ್ವಾತಂತ್ರ್ಯದ ಮೇಲಿನ ಅತಿದೊಡ್ದ ಆಕ್ರಮಣವಾಗಿದೆ. ಪೆಗಾಸೆಸ್ ಕದ್ದಾಲಿಕೆ ಸೈಬರ್ ಭಯೋತ್ಪಾದನೆಯ ಪ್ರತಿರೂಪವೆಂದು ಅವರು ಬಣ್ಣಿಸಿದ್ದಾರೆ. ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ನಿಯಮಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ” ಎಂದು ಗೋವಿಂದಾಚಾರ್ಯ ಹೇಳಿದರು.

- Advertisement -

2019 ರಲ್ಲಿ ಪೆಗಾಸೆಸ್ ಸ್ಪೈವೇರ್ ಗಂಭೀರವಾಗಿ ಪರಿಗಣಿಸುವ ಮೂಲಕ ಪ್ರತ್ಯೇಕ ತನಿಖೆ ಕೋರಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದೆ. ಆದರೇ ಸುಪ್ರೀಮ್ ಕೋರ್ಟ್ ತನ್ನ ಅರ್ಜಿಯನ್ನು ಸ್ವೀಕರಿಸಲು ಸಿದ್ಧವಾಗದ ಕಾರಣ ಆ ಅರ್ಜಿಯನ್ನು ಹಿಂಪಡೆದಿದ್ದೆ ಎಂದು ಅವರು ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ತಿಳಿಸಿದರು. ಆದಾಗ್ಯೂ ಸುಪ್ರೀಮ್ ಕೋರ್ಟ್ ಸೋಮವಾರ ಈ ಪ್ರಕರಣದ ಕುರಿತು ಹೊಸ ಅರ್ಜಿ ಸಲ್ಲಿಸುವಂತೆ ಸೂಚಿಸಿರುವುದು ಸಂತಸ ತಂದಿದೆಯೆಂದು ಗೋವಿಂದಾಚಾರ್ಯ ತಿಳಿಸಿದರು.

ಮಾತ್ರವಲ್ಲದೆ ಪೆಗಾಸೆಸ್ ವಿವಾದದ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಮ್ ಹೇಳಿರುವುದು ಉತ್ತಮ ಬೆಳವಣಿಗೆಯೆಂದು ಅವರು ತಿಳಿಸಿದ್ದಾರೆ. ಸರಿಸುಮಾರು 50,000 ಭಾರತೀಯರ ಫೋನ್ ಗಳನ್ನು ಮೋದಿ ಸರ್ಕಾರ ಪೆಗಾಸೆಸ್ ಕಣ್ಗಾವಲಿನಲ್ಲಿಡಲಾಗಿದೆಯೆಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Join Whatsapp