ಬೆಂಗಳೂರು: ಆಗಸ್ಟ್ 23ರಿಂದ 9 ಹಾಗೂ 10ನೇ ತರಗತಿ ಪ್ರಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕೊರೊನಾ ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆ ಆರಂಭವಾಗಲಿದೆ.
ಆಗಸ್ಟ್ 23ರಿಂದ ಅರ್ಧದಿನ ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಲು ಸೂಚಿಸಿದ್ದು, ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
-ಮಕ್ಕಳು ಶಾಲೆಗೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯ
-ಕೋವಿಡ್ ಲಕ್ಷಣಗಳು ಇಲ್ಲದಿರುವ ಬಗ್ಗೆ ಪೋಷಕರು ದೃಢಪಡಿಸಬೇಕು
-ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1:30 ರವರೆಗೆ ತರಗತಿಗಳು ನಡೆಯಲಿವೆ
-ಶನಿವಾರ ಬೆಳಿಗ್ಗೆ 10ರಿಂದ 12:30ವರೆಗೆ ಮಾತ್ರ ತರಗತಿಗಳು ನಡೆಯಲಿವೆ
-ವಿದ್ಯಾರ್ಥಿಗಳು ಮನೆಯಿಂದಲೇ ಊಟ/ ಕುಡಿಯುವ ನೀರು ತರಬೇಕು
-ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ದಾಯ
-ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ, ಆನ್ ಲೈನ್ ಅಥವಾ ಪರ್ಯಾಯ ವಿಧಾನದಲ್ಲೂ ಹಾಜರಾಗಬಹುದು
-ಅಗತ್ಯವಿದ್ದರೆ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಶುದ್ಧ ಕುಡಿಯುವ ಬಿಸಿ ನೀರಿನ ವ್ಯವಸ್ಥೆ
-ಶಿಕ್ಷಕರು 15-20 ಸಂಖ್ಯೆಯ ವಿದ್ಯಾರ್ಥಿಗಳ ತಂಡಗಳನ್ನಾಗಿ ಮಾಡಿ ಭೌತಿಕ ತರಗತಿ ನಡೆಸಬೇಕು.