ಕಾಬೂಲ್ ನಿಂದ ಅಮೆರಿಕಕ್ಕೆ ಹೊರಟ ವಿಮಾನದಿಂದ ಪ್ರಯಾಣಿಕರಿಬ್ಬರು ಕೆಳಗೆ ಬಿದ್ದು ಸಾವು

Prasthutha|

ಕಾಬೂಲ್ : ಕಾಬೂಲ್ ನಿಂದ ಅಮೆರಿಕಾಕ್ಕೆ ಹೊರಟಿದ್ದ ವಿಮಾನ ಟೇಕಾಪ್ ಆದ ಕೆಲವೇ ಸಮಯದಲ್ಲಿ ಇಬ್ಬರು ಪ್ರಯಾಣಿಕರು ವಿಮಾನದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ವರದಿ ಆಗಿದೆ.

- Advertisement -

ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಉಂಟಾದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಮಿತ್ರಪಡೆಗಳು ಈಗಾಗಲೇ ಹಂತ ಹಂತವಾಗಿ ದೇಶ ತೊರೆಯುತ್ತಿದವೆ. ಭಾರತ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ದೇಶ ತೊರೆಯಲು ಯೋಜನೆ ರೂಪಿಸುತ್ತಿವೆ. ಮಾತ್ರವಲ್ಲದೆ ನಿರ್ಗಮಿತ ಅಧ್ಯಕ್ಷರಾದ ಅಶ್ರಫ್ ಘನಿ ಅಫ್ಘಾನ್ ನಿಂದ ಪಲಾಯಣಗೈದು ಅಮೆರಿಕ ಸೇರುವ ಯೋಜನೆಯಲ್ಲಿದ್ದಾರೆ.

ಪ್ರಸಕ್ತ ಅವರು ಸೋಮವಾರ ಒಮಾನ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಅಧ್ಯಕ್ಷರ ಈ ನಡೆಯಿಂದ ದೇಶದಲ್ಲಿ ಹರಾಜಕತೆ ಸೃಷ್ಟಿಯಾಗಿದೆಯೆಂದು ಅಫ್ಘಾನ್ ರಕ್ಷಣಾ ಸಚಿವರು ತಿಳಿಸಿದ್ದಾರೆ.

- Advertisement -

ತಾಲಿಬಾನ್ ಬಂಡುಕೋರರು ಸರ್ಕಾರ ರಚಿಸುವ ಸೂಚನೆಯ ಹಿನ್ನೆಲೆಯಲ್ಲಿ ಅಫ್ಘಾನ್ ಜನತೆ ಲಭ್ಯವಿರುವ ವಿಮಾನವನ್ನು ಹತ್ತಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಆತುರದಲ್ಲಿ ವ್ಯಾಪಕವಾದ ಜನಸಂದಣಿ ಉಂಟಾಗಿದೆ. ಈ ನಡುವೆ ಕಾಬೂಲ್ ವಿಮಾನದಲ್ಲಿ ನೂಕುನುಗ್ಗಲನ್ನು ನಿಯಂತ್ರಿಸುವ ಸಲುವಾಗಿ ನ್ಯಾಟೋ ಪಡೆ ನಡೆಸಿದ ಗುಂಡು ಹಾರಾಟದಲ್ಲಿ ಇಂದು ಬೆಳಿಗ್ಗೆ 5 ಮಂದಿ ಸಾವನ್ನಪ್ಪಿದ್ದಾರೆ.

Join Whatsapp