ಹೈದರಾಬಾದ್ : ಪೊಲೀಸ್ ಕರ್ತವ್ಯಕ್ಕೆ ಅಡ್ದಿಪಡಿಸಿದ ಮಹಿಳೆಯರ ಬಂಧನ

Prasthutha|

ಹೈದರಾಬಾದ್: ನ್ಯಾಯಾಲಯದ ಸಮನ್ಸ್ ನೀಡಲು ಆಗಮಿಸಿದ ವಿಶೇಷ ತನಿಖಾ ತಂಡದ (ಎಸ್.ಐ.ಟಿ) ಕರ್ತವ್ಯ ನಡೆಸಲು ಅಡ್ಡಿಪಡಿಸಿದ ಕೆಲ ಮಹಿಳೆಯರ ವಿರುದ್ಧ ಸೈದಾಬಾದ್ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಇಸ್ಲಾಹಿ ಎಂಬವರ ಮೇಲೆ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲು ಸಿಟ್ ತಂಡ ಶಸ್ತ್ರಾಸ್ತ್ರ ಸಜ್ಜಿತವಾಗಿ ಆಗಮಿಸಿದ್ದ ವೇಳೆ ಸೈದಾಬಾದ್‌ನ ಜೀವನ್ಯಾರ್‌ಜಂಗ್ ಕಾಲೋನಿಯಲ್ಲಿ ಸೋಮವಾರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಎಸ್‌ಐಟಿಯ ಸಬ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಮತ್ತು ಸಹಾಯಕ ಸಬ್ ಇನ್ಸ್ ಪೆಕ್ಟರ್ ಗುಲಾಂ ಯಜ್ದಾನಿ ನೇತೃತ್ವದ ತಂಡವು ಮುಸ್ಲಿಂ ಧರ್ಮಗುರು ಮೌಲಾನಾ ಅಬ್ದುಲ್ ಅಲೀಮ್ ಇಸ್ಲಾಹಿಯವರ ನಿವಾಸಕ್ಕೆ ಭೇಟಿ ನೀಡಿದಾಗ ಮಹಿಳೆಯರ ಗುಂಪೊಂದು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದೆಯೆಂದು ಪೊಲೀಸರು ದೂರಿದ್ದಾರೆ.

- Advertisement -

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಸಮನ್ಸ್ ಜಾರಿಗೆ ಮುಂದಾದ ಸಿಟ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸ್ಥಳೀಯ ಹದಿನೈದು ಮಹಿಳೆಯರ ತಂಡದ ವಿರುದ್ಧ ಪೊಲೀಸರು ಸೆಕ್ಷನ್ 353 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರೋಪಿಯ ಮನೆಯ ಗೇಟಿಗೆ ನ್ಯಾಯಾಲಯದ ಆದೇಶನ್ವಯ ಸಮನ್ಸ್ ಅಂಟಿಸಲು ಮುಂದೆ ಬಂದಾಗ ಮಾನವ ಸರಪಳಿ ನಿರ್ಮಿಸಿ ಮಹಿಳೆಯರು ಪೊಲೀಸರನ್ನು ತಡೆದಿದ್ದರು.

ನವೆಂಬರ್ 14, 2019 ರಂದು ಕೂಡಾ ಸೈದಾಬಾದ್‌ಗೆ ಸೇರಿದ ಈ ಮಹಿಳೆಯರ ಗುಂಪು ಅಯೋಧ್ಯೆಯ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಸಭೆಯನ್ನು ಆಯೋಜಿಸಿತ್ತು. ಈದ್ಗಾ ಶಾ ಸಹಾಬ್ ನಲ್ಲಿ ಸಭೆ ಸೇರಿದ್ದ ಮಹಿಳೆಯರು ಪ್ರಚೋದನಕಾರಿ ಘೋಷಣೆ ಮತ್ತು ಪ್ರತಿಭಟನೆಯ ನೆಪವೊಡ್ಡಿ ಸೈದಾಬಾದ್ ಪೊಲೀಸರು ಈ ಮಹಿಳೆಯರ ವಿರುದ್ಧ ಐಪಿಸಿ ಸೆಕ್ಷನ್ 124 ಎ, 153 ಎ & ಬಿ, 295 ಎ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.



Join Whatsapp