ಮೀಟೂ ಲೈಂಗಿಕ ಕಿರುಕುಳದ ಆರೋಪ : ಪತ್ರಕರ್ತೆ ಪ್ರಿಯಾ ರಮಣಿಗೆ ನೋಟಿಸ್ ಜಾರಿಗೊಳಿಸಿದ ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿಯ ಮೇಲೆ ಹೂಡಿದ್ದ ಮಾನನಷ್ಟ ಅರ್ಜಿಯನ್ನು ವಜಾಗೊಳಿಸಿರುವ ಕೆಳಗಿನ ಕೋರ್ಟಿನ ಆದೇಶವನ್ನು ಪ್ರಶ್ನಿಸಿ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಾನ್ಯ ಮಾಡಿದೆ. ಈ ಕುರಿತು ವಿಚಾರಣೆ ನಡೆಸಿರುವ ಕೋರ್ಟ್, ಪತ್ರಕರ್ತೆ ಪ್ರಿಯಾ ರಮಣಿಯವರಿಗೆ ನೋಟೀಸು ಜಾರಿಗೊಳಿಸಿ ಆದೇಶಿಸಿದೆ.

- Advertisement -

ನ್ಯಾಯಮೂರ್ತಿ ಮುಕ್ತಾ ಗುಪ್ತ ಅವರು ಈ ಕುರಿತು ಪತ್ರಕರ್ತೆ ಪ್ರಿಯಾ ರಮಣಿಯವರ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಜನವರಿ 13, 2022 ಕ್ಕೆ ಮುಂದೂಡಿದರು. ಹಿರಿಯ ವಕೀಲರಾದ ರಾಜೀವ್ ನಾಯರ್ ಮತ್ತು ಗೀತಾ ಲೂತ್ರಾ ಅವರು ಈ ಪ್ರಕರಣದಲ್ಲಿ ಕರಂಜಾವಾಲಾ & ಕೋ ತಂಡ ಮತ್ತು ಎಮ್.ಜೆ ಅಕ್ಬರ್ ಪರ ವಾದಿಸಿದೆ.

ತನ್ನ ಮೇಲೆ ಸಲ್ಲಿಕೆಯಾದ ಲೈಂಗಿಕ ಕಿರುಕುಳದ ಆರೋಪದ ವಿರುದ್ಧ ಎಮ್.ಜೆ ಅಕ್ಬರ್ ಅವರು ದಾಖಲಿಸಿದ ಮಾನನಷ್ಟ ಮೊಕದ್ದಮೆಯಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ಫೆಬ್ರವರಿ 17 ದೋಷಮುಕ್ತಗೊಳಿಸಿದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಎಮ್.ಜೆ ಅಕ್ಬರ್ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ರವೀಂದ್ರ ಪಾಂಡೆ ಅವರು ಭಾರತೀಯ ಮಹಿಳೆಯರು ಸಮರ್ಥರು, ಅವರು ಶ್ರೇಷ್ಠರಾಗಾಲು ದಾರಿ ಸುಗಮಗೊಳಿಸಬೇಕು ಮತ್ತು ಅವರಿಗೆ ಸ್ವಾತಂತ್ರ್ಯ, ಸಮಾನತೆ ಕಲ್ಪಿಸಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಅಕ್ಬರ್ ಅವರ ಮೇಲೆ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮಾತ್ರವಲ್ಲದೆ ಎಮ್.ಜೆ ಅಕ್ಬರ್ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿರುವುದರ ಹಿಂದೆ ನನಗೆ ಅವರ ಮೇಲೆ ವೈಯಕ್ತಿಕ ದ್ವೇಷವಿರಲಿಲ್ಲವೆಂದು ವಿಚಾರಣೆಯ ವೇಳೆ ಸ್ಪಷ್ಟಪಡಿಸಿದ್ದರು.

ಮೀಟೂ ಅಭಿಯಾನದಲ್ಲಿ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಮೊದಲ ಮಹಿಳೆ ಪ್ರಿಯಾ ರಮಣಿಯಾಗಿದ್ದಾರೆ. ಅವರ ವಿರುದ್ಧ ಹೊರಿಸಲಾದ ಆರೋಪದ ಹಿನ್ನೆಲೆಯಲ್ಲಿ ಅಕ್ಟೋಬರ್ 17 2018 ರಂದು ಕೇಂದ್ರ ಸಚಿವ ಸಂಪುಟ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು.

Join Whatsapp