ಆಝಮ್ ಖಾನ್, ಪುತ್ರನಿಗೆ ಸುಪ್ರೀಮ್ ಕೋರ್ಟ್ ನಿಂದ ಜಾಮೀನು ಮಂಜೂರು

Prasthutha|

ನವದೆಹಲಿ: ಸಮಾಜವಾದಿ ಪಕ್ಷದ ಸಂಸದರಾದ ಅಝಮ್ ಖಾನ್ ಮತ್ತು ಅವರ ಪುತ್ರನಿಗೆ ಮಂಗಳವಾರ ಸುಪ್ರೀಮ್ ಕೋರ್ಟ್ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶಿಸಿದೆ.

- Advertisement -

ಅಲಹಾಬಾದ್ ಹೈಕೋರ್ಟ್ ನವೆಂಬರ್ 26 2020 ಅವರ ಮೇಲಿನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ.ಎಮ್ ಖಾನ್ವಿಲ್ಕರ್, ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠವು, ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ. ಹಿಂದೆ ಸಾಕ್ಷಿಯನ್ನು ತಿರುಚಿದ ಆರೋಪದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ತನ್ನ ಅಪ್ರಾಪ್ತ ಮಗನ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡನೇ ಪಾನ್ ಕಾರ್ಡ್ ವ್ಯವಸ್ಥೆಗೊಳಿಸಿದ ಆರೋಪದಲ್ಲಿ ಅಝಮ್ ಖಾನ್ ಮತ್ತು ಪುತ್ರನ ವಿರುದ್ಧ ದಾಖಲಾಗಿತ್ತು. 2017 ರ ಯುಪಿ ಚುನಾವಣೆಯಲ್ಲಿ ರಾಮ್ಪುರ ಜಿಲ್ಲೆಯ ಸುವಾರ ಅಸೆಂಬ್ಲಿಯಲ್ಲಿ ಉಮೇದುದಾರಿಕೆ ಸಲ್ಲಿಸಲು ನಕಲಿ ದಾಖಲೆಯನ್ನು ಸೃಷ್ಟಿಸಲಾಗಿತ್ತೆಂದು ಹೇಳಲಾಗುತ್ತಿದೆ.

- Advertisement -

ನಕಲಿ ಪ್ರಕರಣದಲ್ಲಿ ಜಾಮೀನು ನೀಡುವುದರೊಂದಿಗೆ ಅಜಂ ಖಾನ್ ಅವರು ಎರಡು ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದಾರೆ.



Join Whatsapp