ಡಾ. ಕಫೀಲ್ ಖಾನ್ ವಿರುದ್ಧ ಮರು ವಿಚಾರಣೆಯ ಅರ್ಜಿಯನ್ನು ಹಿಂಪಡೆಯಲಾಗಿದೆ: ಯುಪಿ ಸರ್ಕಾರ ಸ್ಪಷ್ಟನೆ

Prasthutha|

ಕಾನ್ಪುರ: ಡಾ. ಕಫೀಲ್ ಖಾನ್ ಅವರ ವಿರುದ್ಧ ಮರು ವಿಚಾರಣೆಯ ಆದೇಶವನ್ನು ಹಿಂಪಡೆಯಲಾಗಿದೆಯೆಂದು ಶುಕ್ರವಾರ ಯುಪಿ ಸರ್ಕಾರವು ಅಲಹಾಬಾದ್ ಹೈಕೋರ್ಟ್ ಗೆ ತನ್ನ ವಕೀಲರ ಮೂಲಕ ಸ್ಪಷ್ಟಪಡಿಸಿದೆ. ಡಾ. ಕಫೀಲ್ ಖಾನ್ ಅವರನ್ನು ಕಳೆದ ನಾಲ್ಕು ವರ್ಷಗಳಿಂದ ವೈದ್ಯಕೀಯ ಕರ್ತವ್ಯದಿಂದ ಅಮಾನತು ಗೊಳಿಸಿರುವುದು ಸಮರ್ಥನೀಯವೇ ಎಂದು ಯುಪಿ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ. ಮಾತ್ರವಲ್ಲದೆ ಡಾ. ಕಫೀಲ್ ಖಾನ್ ಅವರು ಮರು ವಿಚಾರಣೆಯಲ್ಲಿ 11 ತಿಂಗಳ ವಿಳಂಬವನ್ನು ನ್ಯಾಯಾಲಯವು ಗಮನಿಸಿದೆ. ಡಾ. ಕಫೀಲ್ ಅವರ ವಿರುದ್ಧ ವಿಚಾರಣಾಧಿಕಾರಿ ತನಿಖೆಯನ್ನು ಮುಗಿಸಿ 2019 ರ ಎಪ್ರಿಲ್ 4ರಂದು ತನ್ನ ವರದಿಯನ್ನು ಸಲ್ಲಿಸಿದ್ದರು.

- Advertisement -

ಯುಪಿ ಸರ್ಕಾರ ಮರು ವಿಚಾರಣೆಯ ಆದೇಶದನ್ವಯ 15.04.2019 ರಂದು ವಿಚಾರಣಾಧಿಕಾರಿ ಪ್ರಧಾನ ಕಾರ್ಯದರ್ಶಿ ಶ್ರೀ ಹಿಮಾಂಶು ಕುಮಾರ್ ಸಲ್ಲಿಸಿದ್ದ ವರದಿ ಆಧಾರದಲ್ಲಿ ಡಾ. ಕಫೀಲ್ ಖಾನ್ ಅವರ ಕರ್ತವ್ಯಕ್ಕೆ ಮರು ನೇಮಕಕ್ಕೆ ಮತ್ತೆ ಜೀವ ಬಂದಿದೆ. 2017 ರಲ್ಲಿ ಡಾ. ಕಫೀಲ್ ಖಾನ್ ಅವರನ್ನು ಬಿ.ಆರ್.ಡಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಆಮ್ಲಜನಕ ಸಿಲಿಂಡರ್ ದುರಂತದಲ್ಲಿ 1000 ಶಿಶುಗಳ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಯುಪಿ ಸರ್ಕಾರ ಭ್ರಷ್ಟಾಚಾರ ಆರೋಪ ಹೊರಿಸಿ ಕರ್ತವ್ಯದಿಂದ ಅಮಾನತು ಗೊಳಿಸಿತ್ತು.

ಭ್ರಷ್ಟಾಚಾರದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸೂಚಿಸುವ ಯಾವುದೇ ಪುರಾವೆಗಳಿಲ್ಲ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳು ಆಧಾರರಹಿತ ಎಂದು ಶ್ರೀ ಕುಮಾರ್ ಅವರು ಸಲ್ಲಿಸಿದ ವರದಿಯು ಉಲ್ಲೇಖಿಸಲಾಗಿದೆ. ವಾಸ್ತವದಲ್ಲಿ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಡಾ. ಕಫೀಲ್ ಖಾನ್ ಅವರ ಮೇಲೆ ಸುಳ್ಳಾರೋಪ ಹೊರಿಸಿರುವುದು ನ್ಯಾಯಾಲಯಕ್ಕೆ ಮನವರಿಕೆಯಾಗಿತ್ತು. ಅಲಹಾಬಾದ್ ಹೈಕೋರ್ಟ್ ಕಳೆದ 4 ವರ್ಷಗಳಿಂದ ವೈದ್ಯ ಕಫೀಲ್ ಖಾನ್ ಅವರ ಅಮಾನತು ಮುಂದುವರಿಸಲು ನೀಡಿರುವ ಆದೇಶದ ಕುರಿತಂತೆ ಆಗಸ್ಟ್ 10 ರೊಳಗೆ ಸ್ಪಷ್ಟನೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.



Join Whatsapp