ನಿರ್ಮಾಣ ಕಾರ್ಯ ಪೂರ್ಣಗೊಂಡ ವಿಶ್ವದ ಅತಿ ಎತ್ತರದ ರಸ್ತೆ!

Prasthutha|

ಹೊಸದಿಲ್ಲಿ: ಪೂರ್ವ ಲಡಾಖ್‌ನ ವಿಶ್ವದ ಅತಿ ಎತ್ತರದ (19,300 ಅಡಿ ಎತ್ತರ) ರಸ್ತೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಉಮ್ಲಿಂಗ್ ಲಾ ರಸ್ತೆಯನ್ನು ಬಾರ್ಡರ್ ರೋಡ್ಸ್ ಆರ್ಗನೈಝೇಶನ್ ಆಶ್ರಯದಲ್ಲಿ ನಿರ್ಮಿಸಲಾಗಿದೆ ಎಂದು ಸರ್ಕಾರ ಬುಧವಾರ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

ಎವರೆಸ್ಟ್ ಬೇಸ್ ಕ್ಯಾಂಪ್‌ಗಳಿಗಿಂತ ಎತ್ತರಕ್ಕೆ ರಸ್ತೆಯನ್ನು ನಿರ್ಮಿಸಲಾಗಿದೆ. ನೇಪಾಳದ ದಕ್ಷಿಣ ಬೇಸ್ ಕ್ಯಾಂಪ್ 17,598 ಅಡಿ ಎತ್ತರದಲ್ಲಿದೆ. ಟಿಬೆಟ್‌ನ ಉತ್ತರ ಬೇಸ್ ಕ್ಯಾಂಪ್ 16,900 ಅಡಿಗಳಲ್ಲಿದೆ. ಆದರೆ ಈ ಪ್ರದೇಶಗಳಲ್ಲಿ ರಸ್ತೆ ಇಲ್ಲ. ಬೊಲಿವಿಯಾದ 18,953 ಅಡಿ ಎತ್ತರದ ರಸ್ತೆಯ ದಾಖಲೆಯನ್ನು ಉಮ್ಲಿಂಗ್ ಲಾ ಮೀರಿಸಿದೆ.

ಹೊಸ ರಸ್ತೆಯು ಲಡಾಖ್‌ನ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು ಸಹಾಯಕವಾಗಲಿದೆ ಎಂದು ಸರ್ಕಾರ ಹೇಳಿದೆ. ಈ ರಸ್ತೆ ನಾಲ್ಕು ವರ್ಷಗಳ ಹಿಂದೆಯೇ ಸುದ್ದಿಯಾಗಿತ್ತು. 52 ಕಿಮೀ ಉದ್ದದ ರಸ್ತೆಯ ಡಾಂಬರೀಕರಣ ಈಗ ಪೂರ್ಣಗೊಂಡಿದೆ.



Join Whatsapp