ರಾಜಕೀಯಕ್ಕೆ ವಿದಾಯ ಘೋಷಿಸಿದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ

Prasthutha|

ನವದೆಹಲಿ, ಜು.31: ಬಿಜೆಪಿ ಸಂಸದ, ಮಾಜಿ ಸಚಿವ ಬಾಬುಲ್ ಸುಪ್ರಿಯೋ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯ ವೇಳೆ ಬಾಬುಲ್ ಸುಪ್ರಿಯೋ ಅವರನ್ನು ಕೈಬಿಡಲಾಗಿತ್ತು.

- Advertisement -


ಗಾಯಕರೂ ಆಗಿರುವ ಬಾಬುಲ್ ಸುಪ್ರಿಯೋ ಶನಿವಾರ ಫೇಸ್‌ ಬುಕ್ ಪೋಸ್ಟ್‌ ನಲ್ಲಿ ‘ರಾಜಕೀಯ ವಿದಾಯ’ ವನ್ನು ಪ್ರಕಟಿಸಿದ್ದಾರೆ.
ಎರಡು ಬಾರಿ ಸಂಸದರಾಗಿರುವ ಸುಪ್ರಿಯೋ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದರು.
ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ನ ಅರೂಪ್ ಬಿಸ್ವಾಸ್ ವಿರುದ್ಧ ಸೋತಾಗಲೇ ಸುಪ್ರಿಯೋ ಅವರ ರಾಜಕೀಯ ಕೊನೆಗೊಂಡಿದೆ ಎಂಬ ಮಾತುಗಳು ಕೇಳಿಬಂದಿದ್ದವು.


“ಅಲ್ವಿದಾ. ನಾನು ಬೇರೆ ಯಾವುದೇ ಪಕ್ಷಕ್ಕೆ ಹೋಗುತ್ತಿಲ್ಲ – ಟಿಎಂಸಿ, ಕಾಂಗ್ರೆಸ್, ಸಿಪಿಐಎಂ, ಎಲ್ಲಿಯೂ ಹೋಗುವುದಿಲ್ಲ. ಯಾರೂ ನನಗೆ ಕರೆ ಮಾಡಿಲ್ಲ. ನಾನು ಒಬ್ಬ ತಂಡದ ಆಟಗಾರ! ಬಿಜೆಪಿ ಪಶ್ಚಿಮ ಬಂಗಾಳ ತಂಡದೊಂದಿಗೆ ಇರುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.



Join Whatsapp