ಮಾಸ್ಕ್ ಧರಿಸದ್ದಕ್ಕಾಗಿ ಗುಜರಾತ್ ಪೊಲೀಸರಿಂದ ಹಲ್ಲೆಗೊಳಗಾದ ಯುವಕ ಕೋಮಾಕ್ಕೆ!

Prasthutha|

►ಮುಸ್ಲಿಮ್ ಎಂಬ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆಯೆಂದು ಆರೋಪಿಸಿದ ಕುಟುಂಬ

- Advertisement -

ಸೂರತ್ ಜುಲೈ 28: ಮಾಸ್ಕ್ ಧರಿಸದ ಕಾರಣಕ್ಕಾಗಿ ಪೊಲೀಸರು ಕ್ರೂರವಾಗಿ ಥಳಿಸಿದ ಹಿನ್ನೆಲೆಯಲ್ಲಿ ಯುವಕ ಕೋಮ ಸ್ಥಿತಿ ತಲುಪಿರುವ ಘಟನೆ ಗುಜರಾತಿನ ಸೂರತ್ ನಿಂದ ವರದಿಯಾಗಿದೆ. ಮುಸ್ಲಿಮ್ ಎಂಬ ಕಾರಣಕ್ಕಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆಯೆಂದು ಕುಟುಂಬದ ಮೂಲಗಳು ಆರೋಪಿಸಿದೆ.

ಹಲ್ಲೆಗೊಳಗಾದ ಯುವಕನನ್ನು ಸೂರತ್ ಜಿಲ್ಲೆಯ ಉಮ್ರಾ ಗ್ರಾಮದ ಸಮೀರ್ ಅನ್ಸಾರಿಯೆಂದು ಗುರುತಿಸಲಾಗಿದೆ. ಜುಲೈ 22 ರಂದು ಈ ಘಟನೆ ನಡೆದಿದೆಯೆಂದು ಹೇಳಲಾಗಿದೆ. ಜುಲೈ 22 ರಂದು ರಾತ್ರಿ 9 ಘಂಟೆಗೆ ಸಮೀರ್ ನ ಮೊಬೈಲ್ ತಾಯಿ ಕರೆ ಮಾಡಿದಾಗ ಹಲವು ಸಮಯದ ನಂತರ ಸಮೀರ್ ನ ಫೋನ್ ಅನ್ನು ಸ್ವೀಕರಿಸಿದ ಪೊಲೀಸರು ಅಫಘಾತದ ಹಿನ್ನೆಲೆಯಲ್ಲಿ ಸಮೀರ್ ನನ್ನು ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ತಕ್ಷಣ ಆಸ್ಪತ್ರೆ ತಲುಪಿದೆವು.

- Advertisement -

ಸಮೀರ್ ನನ್ನು ಬೆತ್ತಲೆ ಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆಯೆಂದು ಆಸ್ಪತ್ರೆ ಮೂಲಗಳು ತಿಳಿಸಿತ್ತು. ಸಮೀರ್ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಪಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈಗ ಸಮೀರ್ ನ ತಲೆಯಲ್ಲಿ ಅನೇಕ ಮುರಿತಗಳಿವೆ ಮತ್ತು ಆತನ ಸ್ಥಿತಿ ತುಂಬಾ ಗಂಭೀರವಾಗಿರುವ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆಂದು ಸಮೀರ್ ಹಿರಿಯ ಸಹೋದರ ತನ್ವೀರ್ ಅನ್ಸಾರಿ ಯವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮುಸ್ಲಿಮ್ ಎಂಬ ಕಾರಣಕ್ಕಾಗಿ ಪೊಲೀಸರು ತನ್ನ ಸಹೋದರನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆಂದು ತನ್ವೀರ್ ಅನ್ಸಾರಿ ಆರೋಪಿಸಿದ್ದಾರೆ. ರಾಜ್ಯದೆಲ್ಲೆಡೆ ಮುಸ್ಲಿಮ್ ವಿರೋಧಿ ಹಿಂಸೆ ವ್ಯಾಪಕವಾಗುತ್ತಿದೆಯೆಂದು ತನ್ವೀರ್ ಅನ್ಸಾರಿ ಆರೋಪಿಸಿದರು . ಮಾಸ್ಕ್ ಧರಿಸಿದ್ದ ನನ್ನ ಸಹೋದರ ಕಾಫಿ ಕುಡಿದ ನಂತರ ಮಾಸ್ಕ್ ಅನ್ನು ಸರಿಯಾಗಿ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದ ಪೊಲೀಸರು ನಂತರ ವ್ಯಾನ್‌ನಿಂದ ಹಾರಿದ ಹಿನ್ನೆಲೆಯಲ್ಲಿ ಆತನಿಗೆ ಗಾಯವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅದು ಶುದ್ದ ಸುಳ್ಳು. ನಾವು ಆತನನ್ನು ಎತ್ತಿಕೊಂಡು ಹೋದಾಗ ಅವನ ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ.   ಮಾತ್ರವಲ್ಲದೇ ಆತನ ದೇಹದ ಮೇಲೆ ಇನ್ನೂ ಅನೇಕ ಗಾಯಗಳಿವೆ.  ಇದಕ್ಕಿಂತ ಮೊದಲು ಪೊಲೀಸರು ಆತನನ್ನು ಕ್ರೂರವಾಗಿ ಥಳಿಸಿದ್ದಾರೆ. ಅವರ ಆರೋಗ್ಯವು ಹದಗೆಟ್ಟಾಗ ಅವರು ಆಸ್ಪತ್ರೆಗೆ ಕರೆದೊಯ್ದರು ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಈಗ ಅವರು ನನ್ನ ಸಹೋದರನ ವಿರುದ್ಧ ಪೊಲೀಸರು ಸುಳ್ಳು ಹೇಳುತ್ತಾ ಇದ್ದಾರೆಂದು ಅನ್ಸಾರಿ ದೂರಿದ್ದಾರೆ.

ತನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಅನ್ಸಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ತಪ್ಪಿತಸ್ಥ ಪೊಲೀಸರ ವಿರುದ್ಧ ನಗರ ಪೊಲೀಸ್ ಆಯುಕ್ತರು ಮತ್ತು ಉನ್ನತ ಪೊಲೀಸರು ಜಂಟಿಯಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.



Join Whatsapp