ಯುಪಿ ಚುನಾವಣೆಯಲ್ಲಿ ಕಾಂಗ್ರೆಸ್ ಕಿಂಗ್ ಮೇಕರ್: ಧೀರಜ್ ಗುರ್ಜರ್

Prasthutha|

ಲಕ್ನೋ, ಜುಲೈ 26: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಬಹುಮತವನ್ನು ಪಡೆಯುವ ಮೂಲಕ ಕಿಂಗ್ ಆಗಿ ಹೊರಹೊಮ್ಮಲಿದೆಯೆಂದು ಕಾಂಗ್ರೆಸ್ ಹಿರಿಯ ಮುಖಂಡ ಧೀರಜ್ ಗುರ್ಜರ್ ಹೇಳಿದ್ದಾರೆ. 2022 ರಲ್ಲಿ ಯುಪಿಯ ಅಧಿಕಾರ ಕಾಂಗ್ರೆಸ್ ವಶದಲ್ಲಿರುತ್ತದೆ ಮತ್ತು ನಾವು ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತೇವೆ” ಎಂದು ಗುರ್ಜರ್ ತಿಳಿಸಿದರು. ಕಾಂಗ್ರೆಸ್ ಕಿಂಗ್ ಅಥವಾ ಕಿಂಗ್ ಮೇಕರ್ ಆಗಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಈ ಮೇಲಿನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

- Advertisement -

ರಾಜ್ಯ ವಿಧಾನಸಭೆಯಲ್ಲಿ ಏಳು ಸ್ಥಾನಗಳಿಂದ 200 ಕ್ಕೂ ಅಧಿಕ ಸ್ಥಾನವನ್ನು ಕಾಂಗ್ರೆಸ್ ಪಡೆಯುವುದು ಪ್ರಾಯೋಗಿಕವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರು ಸಂಸದರಿಂದ ಬಿಜೆಪಿ ಯಾತ್ರೆ ಆರಂಭಿಸಿ ಕೇಂದ್ರದಲ್ಲಿ ಸರ್ಕಾರ ರಚಿಸಿರುವಾಗ ನಮ್ಮ ಪ್ರಯಾಣ ಕಠಿಣವಾದರೂ ನಾವು ಸುಲಭಗೊಳಿಸಲಿದ್ದೇವೆ. ಯುಪಿ ಮತದಾರರು ಈ ಸಲ ನಮಗೆ ಮತ ನೀಡಲಿದ್ದಾರೆಂದು ಭರವಸೆಯಿದೆಯೆಂದು ತಿಳಿಸಿದ್ದಾರೆ.

ಮಾತ್ರವಲ್ಲ ಕಳೆದ 30 ವರ್ಷಗಳಲ್ಲಿ ಬಿಜೆಪಿ, ಎಸ್.ಪಿ ಮತ್ತು ಬಿಎಸ್ಪಿ ಉತ್ತರ ಪ್ರದೇಶವನ್ನು ನಾಶಪಡಿಸಿದೆ. ಬದಲಾವಣೆ ಕಾಂಗ್ರೆಸ್ ನ ಸಂಕಲ್ಪವಾಗಿದ್ದು, ರಾಜ್ಯದಲ್ಲಿ ಬದಲಾವಣೆಯನ್ನು ಖಾತರಿಪಡಿಸುತ್ತೇವೆ. ಅದೇ ರೀತಿಯಲ್ಲಿ ಪ್ರಿಯಾಂಕಾ ಗಾಂಧಿ ಆಜ್ಞೆಯ ಮೇರೆಗೆ ಕಾಂಗ್ರೆಸ್ 1.64 ಲಕ್ಷ ಪದಾಧಿಕಾರಿಗಳ ಸೈನ್ಯವನ್ನು ಸಿದ್ಧಪಡಿಸುತ್ತಿದೆ. ಸಂಗಥನ್ ಶ್ರೀಜನ್ ಅಭಿಯಾನ್ ಅವರ ಅಡಿಯಲ್ಲಿ 75 ಜಿಲ್ಲೆಗಳಲ್ಲಿ ಹೊಸ ಪಕ್ಷದ ಅಧ್ಯಕ್ಷರು ಮತ್ತು 831 ಬ್ಲಾಕ್ ಸಮಿತಿಗಳ ಹೊಸ ನಗರ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಹಿರಿಯ ಮತ್ತು ಯುವ ನಾಯಕರಿಗೆ ಅವಕಾಶ ನೀಡಲು ಯೋಜನೆ ಸಿದ್ದಪಡಿಸಿದೆಯೆಂದು ಗುರ್ಜರ್ ಅವರು ತಿಳಿಸಿದ್ದಾರೆ. ಈ ಮೂಲಕ 2022 ರ ಯುಪಿ ಚುನಾವಣೆಯಲ್ಲಿ 30 ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೆಂದು ಗುರ್ಜರ್ ತಿಳಿಸಿದ್ದಾರೆ.



Join Whatsapp