ಒಲಿಂಪಿಕ್ಸ್ ಪದಕಗಳನ್ನು ಯಾವುದರಿಂದ ತಯಾರಿಸಲಾಗಿದೆ ಎಂದು ನಿಮಗೆ ಗೊತ್ತೇ?

Prasthutha|

ಟೋಕಿಯೋ: ಜಪಾನಿಯರು ಒಲಿಂಪಿಕ್ಸ್ ವಿಜೇತರಿಗೆ ನೀಡಲಾಗುವ ಪದಕಗಳನ್ನು ಹೇಗೆ ತಯಾರಿಸಿದ್ದಾರೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಸಾಧನಗಳಿಂದ ಟೋಕಿಯೋ ಒಲಿಂಪಿಕ್ಸ್ ವಿಜೇತರಿಗೆ ನೀಡಲಾಗುವ ಪದಕಗಳನ್ನು ತಯಾರಿಸಲಾಗಿದೆ ಎಂದರೆ ನಂಬಲು ಸಾಧ್ಯವೇ. ಹೌದು ಇದನ್ನು ನೀವು ನಂಬದಿದ್ದರೂ ನಿಜ!

- Advertisement -

ಜಪಾನ್ ನಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವ ಮೂಲಕ ಉಪಯೋಗಕ್ಕೆ ಸೂಕ್ತವಲ್ಲದ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಗಳನ್ನು ಒಲಿಂಪಿಕ್ಸ್ ಸಂಘಟನಾ ಸಮಿತಿಗೆ ಹಸ್ತಾಂತರಿಸಬೇಕೆಂದು ಕರೆ ನೀಡಲಾಗಿತ್ತು. ಆದರೆ ಕೆಲವೇ ಅವಧಿಯಲ್ಲಿ ಐವತ್ತು ಲಕ್ಷ ಮೊಬೈಲ್ ಫೋನ್ ಗಳು ಶೇಖರಣೆಯಾಗಿದೆ.


ಇವೆಲ್ಲವನ್ನೂ ಮರುಬಳಕೆ ಮಾಡುವ ಮೂಲಕ ವಿಜೇತರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಯಾರಿಸಲಾಗಿದ್ದು, ಟೋಕಿಯೊದಲ್ಲಿ ವಿಜೇತರಿಗಾಗಿ 1017 ಪದಕಗಳು ಸಿದ್ಧಗೊಂಡಿದೆ. ಒಲಿಂಪಿಕ್ಸ್ ಪದಕವನ್ನು ತಯಾರಿಸಲು ಬೇಕಾದ ಲೋಹ ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಸಾಧನಗಳಲ್ಲಿದೆ ಎಂಬ ಅಂಶವನ್ನು ಪರಿಚಯಿಸುವುದರ ಜೊತೆಗೆ ತ್ಯಾಜ್ಯ ವಿಲೇವಾರಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ಟೋಕಿಯೊ ಒಲಿಂಪಿಕ್ಸ್ ನೀಡಿದೆ.

Join Whatsapp