ತಾಲಿಬಾನ್ ದಾಳಿ ಹಿನ್ನೆಲೆ: ಭಾರತ ಭೇಟಿ ಮುಂದೂಡಿದ ಅಫ್ಘಾನ್ ಸೇನಾ ಮುಖ್ಯಸ್ಥ

Prasthutha|

ಕಾಬೂಲ್, ಜುಲೈ 26: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಡೆಸಿದ ಆಕ್ರಮಣದ ಹಿನ್ನೆಲೆಯಲ್ಲಿ ಅಫ್ಘಾನ್ ಸೇನಾ ಮುಖ್ಯಸ್ಥ ಜನರಲ್ ವಾಲಿ ಮುಹಮ್ಮದ್ ಅಹ್ಮದ್ ಝಾಯಿ ಅವರು ಈ ವಾರ ಕೈಗೊಳ್ಳಬೇಕಾಗಿದ್ದ ಭಾರತ ಭೇಟಿಯನ್ನು ಮುಂದೂಡಿದ್ದಾರೆ ಎಂದು ಅಫಘಾನ್ ರಾಯಭಾರ ಕಚೇರಿ ಸೋಮವಾರ ತಿಳಿಸಿದೆ.

- Advertisement -

ಜುಲೈ 27 ರಿಂದ 30 ವರೆಗೆ ಭಾರತ ಪ್ರವಾಸ ನಡೆಸಲಿರುವ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ಭೇಟಿಯ ವೇಳೆಯಲ್ಲಿಯೇ ಅಹ್ಮದ್ ಝಾಯಿ ಭಾರತ ಭೇಟಿ ನಿಗದಿಯಾಗಿತ್ತು. ಆದರೇ ಅಫ್ಘಾನಿಸ್ತಾನದಲ್ಲಿ ಯುದ್ಧ ಮತ್ತು ತಾಲಿಬಾನ್ ಕಡೆಯಿಂದ ಹೆಚ್ಚಿದ ದಾಳಿಯಿಂದಾಗಿ ಈ ಭೇಟಿಯನ್ನು ಮುಂದೂಡಲಾಗಿದೆಯೆಂದು ಅಫ್ಘಾನ್ ರಾಯಭಾರಿ ಕಚೇರಿ ಸ್ಪಷ್ಟಪಡಿಸಿದೆ.

ಅಹ್ಮದ್ ಝಾಯಿ ಭಾರತ ಭೇಟಿ ವೇಳೆಯಲ್ಲಿ ಅವರ ಭಾರತೀಯ ಸಹವರ್ತಿ ಜನರಲ್ ಎಮ್.ಎಮ್. ನಾರವನೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಭದ್ರತಾ ಅಧಿಕಾರಿಗಳೊಂದಿಗೆ ಮಾತುಕತೆ ನಿಗದಿಯಾಗಿತ್ತು.
ಇತರ ದೇಶಗಳ ಭೂಪ್ರದೇಶ ಮತ್ತು ಗಡಿರೇಖೆಗಳನ್ನು ವಶಪಡಿಸಲು ತಾಲಿಬಾನ್ ನಡೆಸುತ್ತಿರುವ ಪ್ರಯತ್ನದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾದ ಭದ್ರತೆಯ ಕುರಿತು ಸಮಾಲೋಚನೆ ನಡೆಸಲು ಉಭಯ ರಾಷ್ಟ್ರಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡಿದಿತ್ತು.

Join Whatsapp