ಸಿಎಂ ಸ್ಥಾನಕ್ಕೆ ಕೋಟಾ ಹೆಸರು ಪ್ರಸ್ತಾಪ ವಿಚಾರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯ ಗೌರವಿಸಬೇಕು ಎಂದ ಪೂಜಾರಿ

Prasthutha|

ಮಂಗಳೂರು, ಜು.25: ಮುಖ್ಯಮಂತ್ರಿ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಹೆಸರು ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ನಿಂದ ಬರುವ ಸೂಚನೆ ಪಾಲಿಸುತ್ತೇನೆ. ಮುಂದಿನದ್ದನ್ನು ಸಿಎಂ, ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ನಿರ್ಧಾರ ಮಾಡುತ್ತಾರೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರು ಆಗ್ರಹ ವಿಚಾರದಲ್ಲಿ ಯಾರಾದರೂ ಏನಾದರೂ ಹೇಳಬಾರದು ಎನ್ನುವುದು ಏನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಗೌರವಿಸಬೇಕಿದೆ. ಸಾಮಾನ್ಯ ಕಾರ್ಯಕರ್ತನಾಗಿ ನನ್ನಂಥವರು ಪಕ್ಷದ ಹಿರಿಯರು ಹೇಳಿದ್ದನ್ನು ಕೇಳುತ್ತೇನೆ ಯಾರೂ ಏನೇ ಹೇಳಿದರೂ ಪ್ರಜಾಪ್ರಭುತ್ವದಲ್ಲಿ ಗೌರವಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ಆಸ್ಕರ್ ಆರೋಗ್ಯ ವಿಚಾರಿಸಿದರು.

- Advertisement -

ಬಳಿಕ ಮಾತನಾಡಿದ ಪೂಜಾರಿ, ಕೊಂಕಣ್ ರೈಲ್ವೇ, ಹೆದ್ದಾರಿ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಗೆ ಆಸ್ಕರ್ ಕಾರಣಕರ್ತರು. ಒಂದು ಆದರ್ಶ ಮತ್ತು ವಿಶ್ವಾಸಾರ್ಹ ರಾಜಕಾರಣಿಗಳಲ್ಲಿ ಆಸ್ಕರ್ ಒಬ್ಬರು. ಬಹಳ ಸಾತ್ವಿಕ ಮತ್ತು ಸಜ್ಜನರಾಗಿರುವ ಅವರ ಬಗ್ಗೆ ವ್ಯಕ್ತಿಗತ ಗೌರವವಿದೆ. ಅವರು ಅನಾರೋಗ್ಯಕ್ಕೆ ತುತ್ತಾಗಿರುವುದು ಬಹಳ ನೋವು ತಂದಿದೆ. ಅವರು ಬಹುಬೇಗನೇ ಗುಣಮುಖರಾಗಿ ಬರಲಿ, ಮತ್ತೆ ನಮ್ಮ ಜೊತೆ ಹೆಜ್ಜೆ ಇಡಲಿ ಎಂದು ಮಂಗಳೂರಿನಲ್ಲಿ ಹೇಳಿದರು.



Join Whatsapp