ಟೋಕಿಯೋ ಒಲಿಂಪಿಕ್ಸ್; ಹಾಕಿಯಲ್ಲಿ ಭಾರತಕ್ಕೆ ಹೀನಾಯ ಸೋಲು

Prasthutha|

ಟೋಕಿಯೋ, ಜು.25: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಹಾಕಿ ಪಂದ್ಯದಲ್ಲಿ ಆಸ್ಟ್ರೇಲಿಯಾ
ತಂಡದ ಭರ್ಜರಿ ಪ್ರದರ್ಶನದ ಮುಂದೆ ಭಾರತ ತಂಡ ಮಂಕಾಗಿದೆ. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ ಗೋಲಿನ ಮೇಲೆ ಗೋಲು ಗಳಿಸುತ್ತಾ ಸಾಗಿತು. ಅಂತಿಮವಾಗಿ 7-1ರ ಬೃಹತ್ ಅಂತರದಿಂದ ಭಾರತ ತಂಡವನ್ನು ಮಣಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

- Advertisement -

ಮೊದಲಾರ್ಧದಲ್ಲಿಯೇ 4-0 ಅಂತರದಿಂದ ಮುನ್ನಡೆಯನ್ನು ಸಾಧಿಸಿತ್ತು ಬಲಿಷ್ಠ ಆಸ್ಟ್ರೇಲಿಯಾ. ಇದೇ ಆಟವನ್ನು ಪಂದ್ಯದ ಅಂತ್ಯದವರೆಗೂ ಮುಂದುವರಿಸಿಕೊಂಡು ಸಾಗಿತ್ತು. ಭಾರತದ ರಕ್ಷಣಾ ಕೋಟೆಯನ್ನು ಕೆಡವುತ್ತಾ ಸಾಗಿದ ಆಸಿಸ್ ಸುಲಭವಾಗಿ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಂತಿಮ ಹಂತದವರೆಗೂ ಸ್ಥಿರ ಪ್ರದರ್ಶನ ನೀಡಲು ಯಶಸ್ವಿಯಾದ ಆಸ್ಟ್ರೇಲಿಯಾ, ಭಾರತ ತಂಡದ ವಿರುದ್ಧ ಭಾರೀ ಗೆಲುವು ಸಾಧಿಸಿದೆ.

ದ್ವಿತಿಯಾರ್ಧದಲ್ಲಿ ಭಾರತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿತಾದರೂ ಇದರಿಂದ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ. ಕೇವಲ ಒಂದು ಗೋಲುಗಳಿಸಲಷ್ಟೇ ಭಾರತ ತಂಡ ಶಕ್ತವಾಯಿತು.

Join Whatsapp