ಉದ್ಯಮಿ, ಸಮಾಜ ಸೇವಕ ಉದ್ಯಾವರ ಹಾಜಿ ಸೂಫಿ ಇಬ್ರಾಹಿಂ ನಿಧನ

Prasthutha|

ಮಂಗಳೂರು: ಉದ್ಯಮಿಯಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಹಾಜಿ ಸೂಫಿ ಇಬ್ರಾಹಿಂ ನಾಹಾ (75) ಇಂದು ಕಾಸರಗೋಡಿನ ಮಿನ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‌. ಉದ್ಯಾವರ ಸಾವಿರ ಜಮಾತ್ ಇದರ ಅಧ್ಯಕ್ಷರಾಗಿ, ಅಲ್ ಸಖಾಫ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಹಾಜಿ ಸೂಫಿ ಇಬ್ರಾಹಿಂ ನಾಹಾ ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.

- Advertisement -

ಮೃತರ ಅಂತ್ಯ ಕ್ರಿಯೆಯು ಇಂದು ಸಂಜೆ ಉದ್ಯಾವರ ಸಾವಿರ ಜಮಾತ್ ಖಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ಹಾಜಿ ಸೂಫಿ ಇಬ್ರಾಹಿಂ ನಾಹಾ ರವರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ‌.



Join Whatsapp