ನೈಜೀರಿಯಾ: ವಾಯವ್ಯ ನೈಜೀರಿಯಾದ ಬೆಥೆಲ್ ಬ್ಯಾಪ್ಟಿಸ್ಟ್ ಪ್ರೌಢ ಶಾಲೆಯ 150ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬಂದೂಕುಧಾರಿಗಳು ಅಪಹರಣ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ದಾಳಿಯು ಕಳೆದ ಡಿಸೆಂಬರ್ನಿಂದ ಇಲ್ಲಿಯವರೆಗೆ ವಾಯುವ್ಯ ನೈಜೀರಿಯಾದಲ್ಲಿ ನಡೆದ 10ನೇ ಸಾಮೂಹಿಕ ಅಪಹರಣ ಪ್ರಕರಣವಾಗಿದೆ ಎನ್ನಲಾಗಿದ್ದು, ಸುಲಿಗೆ ಮಾಡುವ ಉದ್ದೇಶದಿಂದ ದರೋಡೆಕೋರರು ವಿದ್ಯಾರ್ಥಿಗಳನ್ನು ಅಪಹರಣ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ಅಪಹರಣ ವಾರ್ತೆ ಕೇಳಿ ಶಾಲೆಯ ಕಾಂಪೌಂಡ್ ಬಳಿ ಜಮಾಯಿಸಿದ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಬಂದೂಕುಧಾರಿಗಳು ವಸತಿ ಶಾಲೆಯ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿ 150ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹತ್ತಿರದ ಕಾಡಿಗೆ ಕೊಂಡೊಯ್ದಿದ್ದಾರೆ. ಪ್ರಕರಣ ಸಂಬಂಧ ಮಹಿಳಾ ಶಿಕ್ಷಕಿ ಸೇರಿದಂತೆ 26 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.