ಪುತ್ತೂರಿನಲ್ಲಿ ಮುಂದುವರಿದ ವಿಧ್ವಂಸಕ ಕೃತ್ಯ| ಅಮರ್ ಜವಾನ್ ಜ್ಯೋತಿಗೆ ಹಾನಿ!

Prasthutha: July 6, 2021

ಈ ಹಿಂದೆ ಅಂಬೇಡ್ಕರ್, ಗಾಂಧಿ ಪ್ರತಿಮೆಗಳನ್ನು ಹಾನಿಗೊಳಿಸಲಾಗಿತ್ತು

ಪುತ್ತೂರು: ಪುತ್ತೂರಿನ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ಇಂದು (ಜು.6) ಬೆಳಿಗ್ಗೆ ವರದಿಯಾಗಿದೆ.

2017 ರಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಯು ದಕ್ಷಿಣ ಕನ್ನಡದಲ್ಲೇ ಏಕೈಕ ಅಮರ್ ಜವಾನ್ ಜ್ಯೋತಿಯಾಗಿದೆ.

ಅಂಬಿಕಾ ವಿದ್ಯಾಸಂಸ್ಥೆಯ‌ ಮೆನೇಜರ್ ರವೀಂದ್ರರವರು ಇಂದು ಬೆಳಿಗ್ಗೆ ಸ್ಮಾರಕದ ಶುಚಿತ್ವಕ್ಕೆ ತೆರಳಿದಾಗ ಕಿಡಿಗೇಡಿಗಳು ಜ್ಯೋತಿಗೆ ಹಾನಿ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಪುತ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರಿನಲ್ಲಿ ಈ ಹಿಂದೆಯೂ KSRTC ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಪ್ರತಿಮೆ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪ್ರತಿಮೆಗಳನ್ನು ಹಾನಿಗೊಳಿಸಿದ ಘಟನೆಗಳು ನಡೆದಿತ್ತು. ತಪ್ಪಿತಸ್ಥರನ್ನು ಪೊಲೀಸರು ಮಾನಸಿಕ ಅಸ್ವಸ್ಥರೆಂದು ಬಿಂಬಿಸುತ್ತಿದ್ದು, ಇದೇ ಕಾರಣದಿಂದ ಕಿಡಿಗೇಡಿಗಳು ಯಾವುದೇ ಭಯವಿಲ್ಲದೆ ಇಂತಹಾ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ