ಕಳೆದ ಹದಿನೈದು ವರ್ಷಗಳಲ್ಲಿ 10 ವರ್ಷ ಗಳಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ಫೆಡರಲ್ ಆದಾಯ ತೆರಿಗೆಯನ್ನು ಪಾವತಿಸಿಲ್ಲ ಎಂದು ವರದಿಯೊಂದು ತಿಳಿಸಿದೆ.
2016ರಲ್ಲಿ ಅವರು ವೈಟ್ ಹೌಸ್ ಅಧಿಕಾರವನ್ನು ಹಿಡಿದ ವರ್ಷ ಕೇವಲ 750 ಡಾಲರ್ ಮತ್ತು 2017ರಲ್ಲಿ 750 ಡಾಲರ್ ಆದಾಯ ತೆರಿಗೆಯನ್ನು ಪಾವತಿಸಿದ್ದರಷ್ಟೆ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ಕಳೆದ ದಶಕದಲ್ಲಿ ಟ್ರಂಪ್ ತಾನು ಉದ್ಯಮಿಯಾಗಿದ್ದಾಗ ಲಾಭಕ್ಕಿಂತ ಹೆಚ್ಚು ನಷ್ಟದ ವರದಿಯನ್ನು ನೀಡಿದ್ದರು. 72.9 ದಶಲಕ್ಷ ತೆರಿಗೆ ಮರುಪಾವತಿಯನ್ನು ಪಡೆದಿರುವ ಕುರಿತು ಅಮೆರಿಕಾ ಆಂತರಿಕ ಆದಾಯ ಸೇವೆ (ಐ.ಆರ್.ಎಸ್) ಯ ತನಿಖೆಯನ್ನು ಟ್ರಂಪ್ ಎದುರಿಸುತ್ತಿದ್ದಾರೆ. ಅವರು ಸೋತರೆ 100 ದಶಲಕ್ಷ ಡಾಲರ್ ಗೂ ಹೆಚ್ಚು ಪಾವತಿಸಬೇಕಾಗಬಹುದೆಂದು ವರದಿ ತಿಳಿಸಿದೆ.
ಐ.ಆರ್.ಎಸ್ ತನಿಖೆಯು ನಡೆಯುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ತನ್ನ ಆದಾಯ ಘೋಷಣೆಯ ಕುರಿತು ಮಾಹಿತಿಯನ್ನು ನೀಡಲು ನಿರಾಕರಿಸಿದ್ದಾರೆ. ಆದರೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್ ವರದಿಯನ್ನು ನಕಲಿ ಎಂಬುದಾಗಿ ಕರೆದಿದ್ದಾರೆ.