ಅಬುಧಾಬಿ: ಇಲ್ಲಿನ ಪಶ್ಚಿಮ ಬನಿಯಾಸ್‌ನಲ್ಲಿರುವ ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ನ 450 ವಿದ್ಯಾರ್ಥಿಗಳು ವಿಶ್ವದ ಅತಿದೊಡ್ಡ ಪದಕ ನಿರ್ಮಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ಉಕ್ಕಿನಲ್ಲಿ ವಿನ್ಯಾಸಗೊಳಿಸಲಾದ ಈ ಪದಕವು ಸುಮಾರು 450 ಕೆಜಿ ತೂಕ ಮತ್ತು 5.93 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಅಬುಧಾಬಿಯಲ್ಲಿ ಸ್ಥಾಪಿಸಲಾದ 68.5 ಕೆಜಿ ತೂಕ ಮತ್ತು 2.56 ಚದರ ಮೀಟರ್ ವಿಸ್ತೀರ್ಣವಿರುವ ಪದಕದ ದಾಖಲೆಯನ್ನು ಮುರಿದು ಇಂಟರ್ನ್ಯಾಷನಲ್ ಇಂಡಿಯನ್ ಸ್ಕೂಲ್ ನಿರ್ಮಿಸಿದ ಹೊಸ ಪದಕ ಗಿನ್ನೆಸ್ ದಾಖಲೆಯನ್ನು ನಿರ್ಮಿಸಿದೆ.
ಶಾಲೆಯ ಪ್ರಾಂಶುಪಾಲರಾದ ಡಾ.ಬೆನೊ ಕುರಿಯನ್ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ನೌಕರರು ಮತ್ತು ಶಾಲಾ ವ್ಯವಸ್ಥಾಪಕ ನಿರ್ದೇಶಕ ಮುನೀರ್ ಅನ್ಸಾರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಬುಧಾಬಿಯ ಒಬೈದ್ ಅಲ್ ಕೆತ್ ಬೀ ನಿರ್ಮಿಸಿದ್ದ ಗಿನ್ನೆಸ್ ದಾಖಲೆಯನ್ನು ಈ ಹೊಸ ಪದಕ ಮುರಿದಿದೆ ಎಂದು ಈ ವೇಳೆ ಗಿನ್ನೆಸ್ ಪ್ರತಿನಿಧಿ ಕಾನ್ಸೀ ಎಲ್. ಡಿಫ್ರಾವಿ ಘೋಷಿಸಿದರು.