ತೆನೆ ಹೊತ್ತ ಮಹಿಳೆ ಪೆನ್ ಡ್ರೈವ್ ಹೊರಬೇಕಾಗುತ್ತದೆ: ಡಿಕೆ ಸುರೇಶ್ ತಿರುಗೇಟು

Prasthutha|

ಬೆಂಗಳೂರು: ನಾನು ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ. ಅವರ ಕುಟುಂಬ, ಅಭಿಮಾನಿಗಳಿಗೆ ಬೇಸರ ಆಗಬಹುದು. ದೇವೇಗೌಡರ ಕುಟುಂಬದ ಆಸ್ತಿ ಪೆನ್ ಡ್ರೈವ್ ಎಂದು ವ್ಯಂಗ್ಯವಾಡಿದರು.

- Advertisement -


ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಸಹೋದರರದ್ದು ‘420 ಕುಟುಂಬ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಆಸ್ತಿ ಪೆನ್ ಡ್ರೈವ್ ಆಗಿದೆ. ಇನ್ನು ತೆನೆ ಹೊತ್ತ ಮಹಿಳೆ ಪೆನ್ ಡ್ರೈವ್ ಹೊರಬೇಕಾಗುತ್ತದೆ. ಇದು ಪೆನ್ ಡ್ರೈವ್ ಕುಟುಂಬ ಎಂದು ಲೇವಡಿ ಮಾಡಿದರು.

Join Whatsapp