ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದಾಗಿ ಮೀನುಗಾರಿಕಾ ಬೋಟ್ ಒಂದು ಸಮುದ್ರ ಮಧ್ಯೆ ಬಾಕಿಯಾಗಿತ್ತು. ನವ ಮಂಗಳೂರು ಬಂದರ್‌ನಿಂದ 20 ನಾಟಿಕಲ್ ಮೈಲ್ ದೂರದಲ್ಲಿ ಈ ಬೋಟ್ ಸಿಕ್ಕಿ ಹಾಕಿಕೊಂಡಿತ್ತು. ಈ ಬೋಟ್ ನಲ್ಲಿ 10 ಮಂದಿ ಮೀನುಗಾರರಿದ್ದರು ಎನ್ನಲಾಗಿದೆ. ಅವರೆಲ್ಲರನ್ನೂ ರಕ್ಷಿಸಲಾಗಿದೆ.
‘ಲಾರ್ಡ್ ಓಶಿಯನ್’ ಎಂಬ ಹೆಸರಿನ ಈ ಬೋಟ್ ತಮಿಳುನಾಡು ಮೂಲದ್ದು ಎಂದು ತಿಳಿದು ಬಂದಿದೆ. ಮೀನುಗಾರಿಕೆಗೆ ತೆರಳಿದ್ದ ವೇಳೆ ಇಂಜಿನ್ ನಲ್ಲಿ ದೋಷ ಕಾಣಿಸಿಕೊಂಡು ಬೋಟ್ ಬಾಕಿಯಾಗಿತ್ತು. ಮಾಹಿತಿ ಅರಿತ ಇಂಡಿಯನ್ ಕೋಸ್ಟ್ ಗಾರ್ಡ್ ಸೂಕ್ತವಾಗಿ ಸ್ಪಂದಿಸಿ ಮೀನುಗಾರರನ್ನು ರಕ್ಷಣೆ ಮಾಡಿದೆ