ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಯುದ್ಧಾಪರಾಧ : ವಿಶ್ವಸಂಸ್ಥೆ

Prasthutha|

ಇಸ್ರೇಲ್ ಅಕ್ರಮಿತ ಫೆಲೆಸ್ತೀನಿನ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸಿದ್ದು, ಅದರಲ್ಲಿ 253 ಫೆಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಘೋಷಿತ ಸಂಖ್ಯೆಗಿಂತ ನಿಖರವಾಗಿರದಿದ್ದರೆ ಇಸ್ರೇಲ್ ನ ದಾಳಿಯು ಯುದ್ಧಾಪರಾಧಕ್ಕೆ ಸಮ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಮೈಕಲ್ ಬ್ಯಾಚೆಲೆಟ್ ಹೇಳಿದ್ದಾರೆ.  ಈ ಕುರಿತು ಮಾತನಾಡಿದ ಬಾಚೆಲೆಟ್, ಇಸ್ಲಾಮಿಕ್ ಸಹಕಾರ ಸಂಸ್ಥೆ ಹಾಗೂ ಪ್ಯಾಲೆಸ್ಟೈನ್ ಪರ ಮನವಿ ಸಲ್ಲಿಸಿದ್ದ ಪಾಕಿಸ್ತಾನವನ್ನು ಪ್ರಸ್ತಾಪಿಸಿ, ಇಸ್ರೇಲ್ ದಾಳಿಯಲ್ಲಿ ಹಾನಿಗೊಳಗಾದ ನಾಗರಿಕ ಕಟ್ಟಡಗಳನ್ನು ಸೇನಾ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು ಎಂಬ ಬಗ್ಗೆ ತನ್ನ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅವರು ಹೇಳಿದರು.

- Advertisement -

ಘೋಷಿತ ಸಂಖ್ಯೆಗಳು ಅಸಮಾನವಾಗಿದ್ದರೆ ಅದು ಯುದ್ಧಾಪರಾಧವನ್ನು ಆಕರ್ಷಿಸುತ್ತದೆ ಎಂದವರು 47 ಸದಸ್ಯರ ಜಿನೀವಾ ಮಂಡಳಿಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಸ್ರೇಲ್ ಪ್ರದೇಶದೆಡೆಗೆ ವಿವೇಚನೆಯಿಲ್ಲದೆ ಕ್ಷಿಪಣಿ ಉಡಾಯಿಸುವುದರಿಂದ ಹಿಂದೆ ಸರಿಯಬೇಕು ಎಂದು ಕೂಡಾ ಅವರು ಗಾಜಾವನ್ನು ಆಳುತ್ತಿರುವ ಹಮಾಸ್ ನಾಯಕರನ್ನು ಒತ್ತಾಯಿಸಿದ್ದಾರೆ.

ಹಮಾಸ್ ಮೇಲೆ ಮತ್ತದರ ಸೇನಾ ಮೂಲ ಸೌಕರ್ಯವನ್ನು ಗುರಿಯಾಗಿಸಿಕೊಂಡು ನಾವು ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಹೇಳಿದ್ದರೂ ಅಲ್ಲಿ ಭಾರೀ ಪ್ರಮಾಣದ ನಾಗರಿಕರ ಸಾವು ನೋವುಗಳು ಸಂಭವಿಸಿದೆ. ಇದರಿಂದ ದೊಡ್ಡ ಪ್ರಮಾಣದ ಹಾನಿ ಮತ್ತು ನಾಗರಿಕ ಹಿತಾಸಕ್ತಿಗೆ ದಕ್ಕೆಯುಂಟಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾಶಗೊಂಡಿರುವ ಕಟ್ಟಡಗಳನ್ನು ಹಮಾಸ್ ತನ್ನ ಸೇನಾ ಕೇಂದ್ರವಾಗಿ ಬಳಕೆ ಮಾಡುತ್ತಿತ್ತು ಎಂದು ಇಸ್ರೇಲ್ ಹೇಳುತ್ತಿದ್ದರೂ ಅದಕ್ಕೆ ಬಲವಾದ ಯಾವುದೇ ಸಾಕ್ಷ್ಯ ನಮಗೆ ದೊರೆತಿಲ್ಲ. ಇಸ್ರೇಲ್ ಗೆ ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳಲು ಎಷ್ಟು ಹಕ್ಕಿದೆಯೋ ಅದೇ ಮಟ್ಟದ ಹಕ್ಕು ಫೆಲೆಸ್ತೀನಿಯನ್ನರಿಗೂ ಇದೆ ಎಂದವರು ಇದೇ ವೇಳೆ ಹೇಳಿದ್ದಾರೆ

Join Whatsapp