ಲಂಡನ್ : ಜಗತ್ತಿನಲ್ಲೇ ಮೊದಲ ಕೋವಿಡ್ ಲಸಿಕೆ ಪಡೆದ ವ್ಯಕ್ತಿ ಸಾವಿಗೀಡಾಗಿದ್ದಾರೆ. ವಿಲಿಯಮ್ ಶೇಕ್ಸ್ ಪಿಯರ್ ಕೋವಿಡೇತರ ಅನಾರೋಗ್ಯದಿಂದ ತಮ್ಮ 81ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಫೈಝರ್ ಲಸಿಕೆಗೆ ಬ್ರಿಟನ್ ಒಪ್ಪಿಗೆ ನೀಡಿದ ಬಳಿಕ, ಪುರುಷರಲ್ಲಿ ಮೊದಲ ಲಸಿಕೆ ಶೇಕ್ಸ್ ಪಿಯರ್ ಪಡೆದಿದ್ದರು. ಮಹಿಳೆಯರಲ್ಲಿ ಮೊದಲ ಲಸಿಕೆಯನ್ನು 90ರ ಹರೆಯದ ಮಾರ್ಗರೇಟ್ ಕೀನನ್ ಪಡೆದಿದ್ದರು.
ಶೇಕ್ಸ್ ಪಿಯರ್ ನಿಧನರಾಗಿರುವ ಬಗ್ಗೆ ಕಾವೆಂಟ್ರಿ ಕೌನ್ಸಿಲರ್ ಜಾಯ್ನೆ ಇನ್ನಿಸ್ ತಿಳಿಸಿದ್ದಾರೆ. ಅವರು ಪಾರ್ಶ್ವವಾಯುವಿನಿಂದ ನಿಧನರಾದರು ಎಂದು ಬಿಬಿಸಿ ವರದಿ ಮಾಡಿದೆ. ಅಲ್ಪಕಾಲದ ಅನಾರೋಗ್ಯದ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ.