ಕೋವಿಡ್ – 19 3ನೇ ಅಲೆಗೆ ಮಕ್ಕಳು ಹೆಚ್ಚು ಭಾದಿತರಾಗುತ್ತಾರೆಂದು ತಜ್ಞರ ಮತ್ತು ಮಾಧ್ಯಮಗಳ ಮೂಲಕ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಐಸಿಯು ಹಾಸಿಗೆಗಳು, ವೆಂಟಿಲೇಟರ್, HDU, NICU ಹಾಸಿಗೆಗಳ ಕುರಿತು, ಮಕ್ಕಳ ಜನಸಂಖ್ಯೆ ಮತ್ತು ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳ ಶೇಕಡಾವಾರು ಸಂಭಾವನೀಯತೆಯ ಆಧಾರದ ಆಸ್ಪತ್ರೆಗಳಿಗೆ ಅಗತ್ಯವಿರುವ ಯೋಜಿತ ಅವಶ್ಯಕತೆಗಳ ಕುರಿತು, ವೈದ್ಯಕೀಯ ಚಿಕಿತ್ಸಾ ಶಿಷ್ಟಾಚಾರ, ತಾಯಿ ಮತ್ತು ಮಕ್ಕಳ ಲಸಿಕಾಕರಣ, ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ capacity building ಕುರಿತು, Training / Orientation to Nurse’s, ANM and ASHA,HCW ಮತ್ತು ಸಮುದಾಯಕ್ಕೆ / ವಿಶೇಷವಾಗಿ ಪೋಷಕರಿಗೆ ಶೈಕ್ಷಣಿಕ ಸಾಮಗ್ರಿಗಳ ಕುರಿತು, ಇಂಟರ್ನ್ ಸ್ನಾತಕೋತ್ತರ ಪದವೀಧರರಿಗೆ ಕಾರ್ಯಾಗಾರದ ಕುರಿತು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ವಿಶೇಷ ತಜ್ಞ ವೈದ್ಯರ ಸಮಿತಿಯನ್ನು ಕರೆದು ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಡಾ. ಭರತ್ ಶೆಟ್ಟಿ, ಶ್ರೀ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿಯವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಜಿಲ್ಲೆಯ ಮಕ್ಕಳ ವಿಶೇಷ ತಜ್ಞ ವೈದರು, ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.