ಭಾರತೀಯರಿಗೆ ಬಹ್ರೇನ್‌ ಪ್ರವೇಶಕ್ಕೆ ನಿರ್ಬಂಧ

Prasthutha|

ನವದೆಹಲಿ : ಭಾರತ ಸೇರಿದಂತೆ ಐದು ದಕ್ಷಿಣ ಏಷ್ಯಾ ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ಬಹ್ರೇನ್‌ ನಿರ್ಬಂಧ ಹೇರಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದ ಪ್ರಯಾಣಿಕರು ಬಹ್ರೇನ್‌ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

- Advertisement -

ಕೋವಿಡ್‌ ಪ್ರಕರಣಗಳು ಈ ದೇಶಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹ್ರೇನ್‌ ಪ್ರಯಾಣ ನಿರ್ಬಂಧ ಕ್ರಮ ಕೈಗೊಂಡಿದೆ.

ಬಹ್ರೇನ್‌ ನಾಗರಿಕ ವಿಮಾನಯಾನ ವ್ಯವಹಾರಗಳ ಸಚಿವಾಲಯವು ಈ ಎಲ್ಲಾ ದೇಶಗಳ ಎಲ್ಲಾ ವಿಮಾನಗಳ ಪ್ರವೇಶವನ್ನು ಅಮಾನತುಗೊಳಿಸಿದೆ. ಕೋವಿಡ್‌ ನಿಯಂತ್ರಣಕ್ಕೆ ಸಲಹೆ ನೀಡುತ್ತಿರವ ದೇಶದ ಕಾರ್ಯಚರಣೆ ಪಡೆಯ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಆದಾಗ್ಯೂ, ಬಹ್ರೇನ್‌ ನಾಗರಿಗರು, ರೆಸಿಡೆನ್ಸಿ ವೀಸಾ ಹೊಂದಿರುವವರಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಆದರೆ, ಅವರು ಪ್ರಯಾಣಿಸುವಾಗ ವಿಮಾನ ಹತ್ತುವ ಮೊದಲು ಪಿಸಿಆರ್‌ ಪರೀಕ್ಷೆ ವರದಿ ಸಲ್ಲಿಸಬೇಕು ಮತ್ತು ತಮ್ಮ ಮನೆಗಳು ಅಥವಾ ಪರವಾನಿಗೆಯಿರುವ ಪ್ರದೇಶಗಳಲ್ಲಿ 10 ದಿನಗಳ ಕ್ವಾರಂಟೈನ್‌ ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.  



Join Whatsapp