ಕೋವಿಡ್ 19 ಬಗ್ಗೆ ವಿವಾದಾತ್ಮಕ ಹೇಳಿಕೆ | ಮಧ್ಯಪ್ರದೇಶ ಮಾಜಿ ಸಿಎಂ ಕಮಲ್ ನಾಥ್ ವಿರುದ್ಧ FIR ದಾಖಲು

Prasthutha|

ಭೋಪಾಲ್ : ಕೋವಿಡ್ 19 ಸೋಂಕಿನ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಮಲ್ ನಾಥ್ ವಿರುದ್ಧ FIR ದಾಖಲಾಗಿದೆ.

ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಭಾನುವಾರ (ಮೇ 23) ಬಿಜೆಪಿ ಪ್ರತಿನಿಧಿಗಳ ಸಮಿತಿ ಈ ದೂರನ್ನು ದಾಖಲಿಸಲಾಗಿದ್ದು, ಕಮಲ್ ನಾಥ್ ವಿರುದ್ಧ ಯೋಗಿತಾ ಸಾತಂಕರ್ FIR ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಸೋಂಕು ಮತ್ತು ಅದರ ಹರಡುವಿಕೆ ಬಗ್ಗೆ ಸುಳ್ಳು ಎಚ್ಚರಿಕೆ ಸಂದೇಶ ನೀಡುವುದು ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ಕಮಲ್ ನಾಥ್ ವಿರುದ್ಧ ಐಪಿಸಿ ಸೆಕ್ಷನ್ 188 ಮತ್ತು 54ರ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

ಶನಿವಾರ ಉಜ್ಜೈನ್ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಮಲ್ ನಾಥ್ ಅವರು, ಜಾಗತಿಕವಾಗಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್19 ಸೋಂಕು ಭಾರತದ ರೂಪಾಂತರಿ ವೈರಸ್ ಆಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಭೋಪಾಲ್ ಕ್ರೈ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.

- Advertisement -