ಅಲ್ ಅಖ್ಸಾ ಮಸ್ಜಿದ್ ಮೇಲಿನ ದಾಳಿ ಮತ್ತು ಫೆಲೆಸ್ತೀನಿಯನ್ನರನ್ನು ಹೊರದಬ್ಬುವ ಪ್ರಯತ್ನಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ

Prasthutha|

►ಇಸ್ರೇಲಿನ ಹತ್ಯಾಕಾಂಡದ ಯೋಜನೆಗೆ ಅಂತ್ಯ ಹಾಡಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಗ್ರಹ

- Advertisement -

ಇಸ್ರೇಲ್ ಪೊಲೀಸರು ಅಲ್ ಅಖ್ಸಾ ಮಸ್ಜಿದ್ ಮೇಲೆ ದಾಳಿ ನಡೆಸಿರುವುದು ಒಂದು ಭಯೋತ್ಪಾದನಾ ಕೃತ್ಯವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಚೆಯರ್ ಮೆನ್ ಒ.ಎಂ.ಎ. ಸಲಾಂ ಹೇಳಿದ್ದಾರೆ. ಮುಸ್ಲಿಮರ ಪವಿತ್ರ ಸ್ಥಳವಾಗಿರುವ ಅಲ್ ಅಖ್ಸಾದ ಮೇಲಿನ ಇಸ್ರೇಲಿ ದ್ವೇಷವು ಗುಟ್ಟಾಗಿ ಉಳಿದಿರುವ ವಾಸ್ತವವೇನೂ ಅಲ್ಲ. ಅಲ್ ಅಖ್ಸಾ ಮಸ್ಜಿದ್ ನ ಕುರಿತ   ಇತ್ತೀಚಿನ ದುರುದ್ದೇಶಪೂರಿತ ನಡೆಯು ಫೆಲೆಸ್ತೀನಿಯನ್ನರ ವಿರುದ್ಧ ದೊಡ್ಡಮಟ್ಟದ ಇಸ್ರೇಲಿ ಆಕ್ರಮಣದ ಭಾಗವಾಗಿದೆ. ಶೇಕ್ ಜರ್ರಾಹ್ ಆಸುಪಾಸಿನಲ್ಲಿ ಫೆಲೆಸ್ತೀನಿಯನ್ನರನ್ನು ತಮ್ಮ ನಾಡಿನಿಂದ ಬಲವಂತವಾಗಿ ಹೊರದಬ್ಬಲು ನಡೆಯುತ್ತಿರುವ ಇಸ್ರೇಲಿನ ಪ್ರಯತ್ನಗಳು ಫೆಲೆಸ್ತೀನಿಯನ್ನರನ್ನು ಜೆರುಸಲೇಂನಿಂದ ದೂರ ಮಾಡುವ ಅದರ ನರಸಂಹಾರ ಯೋಜನೆಯ ಭಾಗವಾಗಿದೆ.

ತನ್ನ ಅಕ್ರಮ ವಸಾಹತು ಮತ್ತು ಭೂ ಕಬಳಿಕೆಯನ್ನು ನಿಲ್ಲಿಸಬೇಕೆನ್ನುವ ಅಂತಾರಾಷ್ಟ್ರೀಯ ಒತ್ತಾಯದ ಹೊರತಾಗಿಯೂ, ಇಸ್ರೇಲ್ ಫೆಲೆಸ್ತೀನ್ ಜನರ ವಿರುದ್ಧ ಹಿಂಸಾಚಾರದ ಹೊಸ ಅಲೆಯನ್ನು ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಇಸ್ರೇಲ್ ಪೊಲೀಸರು ಮತ್ತು ಯಹೂದಿ ವಸಾಹತುಗಾರರು 10 ಮಕ್ಕಳ ಸಹಿತ 40 ಫೆಲೆಸ್ತೀನ್ ನಿವಾಸಿಗಳನ್ನು ಜೆರುಸಲೇಂ ಆಸುಪಾಸಿನ ಶೇಕ್ ಜರ್ರಾಹ್ ನ ತಮ್ಮ ಮನೆಗಳಿಂದ ಬಲವಂತವಾಗಿ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ. ಒಕ್ಕಲೆಬ್ಬಿಸುವಿಕೆಯ ಭೀತಿಯನ್ನು ಎದುರಿಸುತ್ತಿರುವ ನಿವಾಸಿಗಳೊಂದಿಗೆ ಐಕಮತ್ಯ ತೋರ್ಪಡಿಸುವ ನಿಟ್ಟಿನಲ್ಲಿ ತಮ್ಮ ರಮಝಾನ್ ಉಸವಾಸ ತೊರೆಯಲು ಅಲ್ಲಿ ಸೇರಿದ್ದ ಫೆಲೆಸ್ತೀನಿಯನ್ನರು ಮತ್ತು ಇತರ ಹೋರಾಟಗಾರರು ಬರ್ಬರವಾಗಿ ದಾಳಿಗೊಳಗಾಗಿದ್ದಾರೆ ಮತ್ತು ಹಿಂಸಾಚಾರದಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ.

- Advertisement -

ಈ ಅಮಾನವೀಯ ಹಿಂಸಾಚಾರವನ್ನು ಮತ್ತು ತಮ್ಮ ಮನೆಗಳಿಂದ ನೂರಾರು ಫೆಲೆಸ್ತೀನಿಯನ್ನರನ್ನು ಬಲವಂತವಾಗಿ ಹೊರಹಾಕುವ ಪ್ರಯತ್ನವನ್ನು ಪಾಪ್ಯುಲರ್ ಫ್ರಂಟ್ ತೀವ್ರವಾಗಿ ಖಂಡಿಸುತ್ತದೆ. ಇದು ಐತಿಹಾಸಿಕ ನಗರದಿಂದ ಫೆಲೆಸ್ತೀನಿಯನ್ನರನ್ನು ತೊಡೆದುಹಾಕುವ ಇಸ್ರೇಲಿ ವಸಾಹತು ಯೋಜನೆಯ ಒಂದು ದೊಡ್ಡ ಯೋಜನೆಯಾಗಿದೆ. ಇದು ಸಾವಿರಾರು ವರ್ಷಗಳಿಂದ ಫೆಲೆಸ್ತೀನಿಯನ್ನರ ನಿವಾಸವಾಗಿತ್ತು ಮತ್ತು ಇದನ್ನು ಯಹೂದಿ ನಿವಾಸಗಳಾಗಿ ಪರಿವರ್ತಿಸಲಾಗಿದೆ.

ಯಹೂದಿ ರಾಜ್ಯವು ಶಾಂತಿ ಮಾತುಕತೆ ಅಥವಾ ಅಂತಾರಾಷ್ಟ್ರೀಯ ಕಾನೂನನ್ನು ಗೌರವಿಸುವ ಯಾವುದೇ ನೈಜ ಬದ್ಧತೆಯನ್ನು ಹೊಂದಿಲ್ಲ. ಇಸ್ರೇಲಿ ಕ್ರಮಗಳು ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ ಮತ್ತು ಇದು ಈ ಪ್ರದೇಶದಲ್ಲಿ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ.

ಅಂತಾರಾಷ್ಟ್ರೀಯ ಸಮುದಾಯವು ಮೌನ ಮುರಿಯಬೇಕು ಮತ್ತು ಫೆಲೆಸ್ತೀನ್ ಜನರ ವಿರುದ್ಧ ಜನಾಂಗೀಯ ದ್ವೇಷಿ ಇಸ್ರೇಲ್ ಮತ್ತು ಯಹೂದಿ ಝಿಯೋನಿಸ್ಟ್ ಗುಂಪುಗಳು ನಡೆಸುತ್ತಿರುವ ಹಿಂಸಾಚಾರವನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸಿದೆ.

Join Whatsapp