ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ. ಮಂಜುನಾಥ್ ಕೋವಿಡ್ ಸೋಂಕಿಗೆ ಬಲಿ

Prasthutha|

ತುಮಕೂರು : ಕೆಲ ದಿನಗಳಿಂದ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ.ಮಂಜುನಾಥ್ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

- Advertisement -

ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ. ಮಂಜುನಾಥ್ ಅವರಿಗೆ ಕೆಲ ದಿನಗಳ ಹಿಂದೆ ಕೊರೋನಾ ಸೋಂಕು ತಗುಲಿದ್ದು, ಹೀಗಾಗಿ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ದೊಡ್ಡ ಬಳ್ಳಾಪುರ ಸಮೀಪದ ನೆಲಕುಂಟೆ ಗ್ರಾಮದ 42 ವರ್ಷದ ಮಂಜುನಾಥ್ ಅವರು ಪತ್ನಿ, ಮಗು ಸಹಿತ ಅಪಾರ ಸಂಖ್ಯೆಯ ಬಂಧು- ಮಿತ್ರರನ್ನು ಅಗಲಿದ್ದಾರೆ.

- Advertisement -

ವಿವಿಧ ಕನ್ನಡ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಮಂಜುನಾಥ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ ಮಾಧ್ಯಮ ಮಿತ್ರರು ಸಂತಾಪ ಸೂಚಿಸಿದ್ದಾರೆ.

Join Whatsapp