ಅಲ್ ಅಖ್ಸಾದಲ್ಲಿ ಇಸ್ರೇಲ್ ಸೈನಿಕರಿಂದ ದಾಳಿ; 170ಕ್ಕೂ ಅಧಿಕ ಫೆಲೆಸ್ತೀನಿಯನ್ನರಿಗೆ ಗಾಯ

Prasthutha|


ಇಸ್ರೇಲ್ ಸೈನಿಕರ ಕೌರ್ಯತೆ ಮತ್ತೊಮ್ಮೆ ಜಗತ್ತಿನೆದುರು ಅನಾವರಣಗೊಂಡಿದ್ದು, ಅಲ್ ಅಖ್ಸಾದಲ್ಲಿ ವಿಶೇಷ ಪ್ರಾರ್ಥನೆಗಾಗಿ ನೆರೆದಿದ್ದ ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲ್ ಸೈನಿಕರು ನಡೆಸಿದ ದಾಳಿಯಲ್ಲಿ 170ಕ್ಕೂ ಅಧಿಕ ಫೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ. ಹಲವರ ಪರಿಸ್ಥಿತಿ ಗಂಭೀರವಾಗಿದೆ.

- Advertisement -


ಇಸ್ರೇಲ್ ಆಕ್ರಮಿತ ಪೂರ್ವ ಜೆರುಸಲೆಮ್ ನ ಅಲ್ ಅಖ್ಸಾದಲ್ಲಿ ಪ್ರಾರ್ಥನೆಗಾಗಿ ನೂರಾರು ಮಂದಿ ನೆರೆದಿದ್ದರು. ಅವರನ್ನು ಚದುರಿಸಲು ಇಸ್ರೇಲ್ ಹಿಂಸಾತ್ಮಕ ಬಲಪ್ರಯೋಗ ನಡೆಸಿದೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪವಿತ್ರ ರಂಝಾನ್ ತಿಂಗಳ ಕೊನೆಯ ಶುಕ್ರವಾರವಾದ ನಿನ್ನೆ ನೂರಾರು ಫೆಲೆಸ್ತೀನಿಯನ್ನರು ಅಲ್ ಅಖ್ಸಾ ಮಸೀದಿಯಲ್ಲಿ ನೆರೆದಿದ್ದರು. ಪ್ರಾರ್ಥನೆ ನಿರತರ ಮೇಲೆ ಇಸ್ರೇಲಿ ಸೈನಿಕರು ಏಕಾಏಕಿ ದಾಳಿ ನಡೆಸಿದರು.


ಇಸ್ರೇಲಿ ಗಡಿ ಪೊಲೀಸರು ಮತ್ತು ಸೈನಿಕರು ಅಶ್ರುವಾಯು, ರಬ್ಬರ್ ಗುಂಡುಗಳು ಮತ್ತು ಗ್ರೆನೇಡ್ಗಳನ್ನು ಬಳಸಿ ಪ್ರತಿಭಟನಾ ನಿರತರನ್ನು ಚದುರಿಸಲು ಪ್ರಯತ್ನಿಸಿದರು. ಹಲವು ಮಂದಿ ಫೆಲೆಸ್ತೀನಿಯನ್ನರನ್ನು ಈಗಾಗಲೇ ಬಂಧಿಸಲಾಗಿದೆ.
ಇಸ್ರೇಲ್ ಸೈನಿಕರ ಹಿಂಸಾಚಾರವನ್ನು ಅಮೆರಿಕ, ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ, ಇಸ್ರೇಲ್ ಮತ್ತು ಫೆಲೆಸ್ತೀನ್ ಅಧಿಕಾರಿಗಳು ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸುವಂತೆ ಅಮೆರಿಕ ಸಲಹೆ ನೀಡಿದೆ.



Join Whatsapp