ತಮಿಳುನಾಡಿನಲ್ಲೂ ಮೇ 10ರಿಂದ 24ರವರೆಗೆ ಲಾಕ್ ಡೌನ್

Prasthutha|

ಚೆನ್ನೈ : ಕೋವಿಡ್ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ನೆರೆಯ ತಮಿಳುನಾಡು ಸರ್ಕಾರ ಕೂಡ ಮೇ 10ರಿಂದ ಮೇ 24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.

- Advertisement -

ಮೇ 10ರಂದು ಬೆಳಗ್ಗಿನ ಜಾವ 4 ಗಂಟೆಯಿಂದ ಮೇ 24ರ ಬೆಳಗ್ಗಿನ ಜಾವ 4 ಗಂಟೆವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಮೇ 8 ಮತ್ತು 9 ರಂದು ಸಾರ್ವಜನಿಕರಿಗೆ ಸಂಪೂರ್ಣ ಲಾಕ್‌ಡೌನ್‌ ಗೆ ಮುಂಚಿತವಾಗಿ ತಯಾರಾಗಲು ಅನುವು ಮಾಡಿಕೊಡಲಾಗಿದೆ. ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಅವಧಿಯಲ್ಲಿ ಅಂಗಡಿಗಳು ತೆರೆಯಬಹುದು ಎಂದು ಸರ್ಕಾರ ಹೇಳಿದೆ.

- Advertisement -

ಅಗತ್ಯ ಪ್ರಯಾಣವನ್ನು ಹೊರತುಪಡಿಸಿ, ಸಾರ್ವಜನಿಕ ಸಾರಿಗೆ ಸೇರಿದಂತೆ ಅಂತರ-ಜಿಲ್ಲಾ ವಾಹನ ಸಂಚಾರ ಲಾಕ್‌ಡೌನ್ ಸಮಯದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಆದರೆ ನಿಕಟ ಸಂಬಂಧಿಯ ಸಾವು, ಅಂತ್ಯಕ್ರಿಯೆಗಳು, ಆಸ್ಪತ್ರೆ, ಉದ್ಯೋಗ ಸಂದರ್ಶನಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮದುವೆ ಪ್ರಯಾಣಕ್ಕೂ ಅನುಮತಿ ನೀಡಲಾಗಿದೆ.

Join Whatsapp