ಮಠ ಮಾನ್ಯಗಳಿಗೆ ಸರಕಾರ ನೀಡಿದ ದೇಣಿಗೆ ಹಿಂಪಡೆದು, ಕೊರೊನಾ ನಿರ್ವಹಣೆಗೆ ಬಳಸಿ – ವಿಶ್ವನಾಥ್‌ ಸಲಹೆ

Prasthutha|

- Advertisement -

ಸರಕಾರದ ಖಜಾನೆಯಿಂದ ಮಠ ಮಾನ್ಯಗಳಿಗೆ ಸಾಕಷ್ಟು ಹಣ ನೀಡಲಾಗಿದೆ. ಈಗ ಈ ಕೊರೊನಾ ಸಂಕಷ್ಟದಲ್ಲಿ ಸರಕಾರ ನೀಡಿದ ಹಣ ವಾಪಾಸ್‌ ಕೇಳಿ, ಅದನ್ನು ಕೊರೊನಾ ಸಂಕಷ್ಟದ ಪರಿಹಾರಕ್ಕಾಗಿ ಬಳಸಿಕೊಳ್ಳಿ ಎಂದು ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ”ಈ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮಠ ಮಾನ್ಯಗಳಿಂದ ಹಣ ವಾಪಾಸ್‌ ಕೇಳಿ” ಎಂದು ಹೇಳಿದ ಅವರು, ”ಈ ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮಠ ಮಾನ್ಯಗಳು ಮುಂದೆ ಬರಬೇಕು. ತೀರಾ ಸಂಕಷ್ಟದಲ್ಲಿರುವ ಜನರಿಗೆ ಊಟ, ಔಷಧಿ ಮೊದಲಾದವುಗಳಿಗೆ ಸಹಾಯ ಮಾಡಬೇಕು” ಎಂದು ಮನವಿ ಮಾಡಿದರು.

- Advertisement -

ಬೆಡ್‌ ಬ್ಲಾಕಿಂಗ್‌ ಬಗ್ಗೆ ಮಾತನಾಡಿದ ಅವರು, ”ಓರ್ವ ಸಂಸದ ಹಗರಣವನ್ನು ಬಯಲು ಮಾಡಬೇಕಾದ ಸ್ಥಿತಿ ಬಂದಿದೆಯೇ? ಸರ್ಕಾರಕ್ಕೆ ಯಾವ ಮಾನ ಮರ್ಯಾದೆಯೂ ಇಲ್ಲವೇ? ಸರ್ಕಾರ ಏನು ಮಾಡುತ್ತಿದೆ?” ಎಂದು ತನ್ನದೇ ಪಕ್ಷದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Join Whatsapp