ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಕುವೈಟ್‌ ಸರ್ಕಾರ

Prasthutha|

ದೇಶದಲ್ಲಿ ಕೊರೊನಾದ ಎರಡನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕುವೈಟ್‌ ಸರ್ಕಾರ ಕೂಡಾ ಭಾರತದಿಂದ ಆಗಮಿಸುವ ವಾಣಿಜ್ಯ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಿರುವುದಾಗಿ ಶನಿವಾರ ತಿಳಿಸಿದೆ.

- Advertisement -

ಟ್ವೀಟ್‌ ಮೂಲಕ ತಿಳಿಸಿರುವ ಕುವೈಟ್‌ನ ನಾಗರಿಕ ವಿಮಾನಯಾನ ಡೈರೆಕ್ಟರೇಟ್‌‌ ಜನರಲ್‌, “ಈ ಆದೇಶ ಇಂದಿನಿಂದ ಅನ್ವಯವಾಗಲಿದ್ದು, ಈ ನಿರ್ಬಂಧವು ಮುಂದಿನ ಆದೇಶದವರೆಗೂ ಮುಂದುವರೆಯಲಿದೆ. ಕುವೈಟ್‌ಗೆ ಭಾರತದಿಂದ ಆಗಮಿಸುವ ಎಲ್ಲಾ ವಾಣಿಜ್ಯ ನಾಗರಿಕ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

“ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ವಿಚಾರದ ಬಗ್ಗೆ ಅವಲೋಕಿಸಿದ ಬಳಿಕ ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

- Advertisement -

“ಭಾರತದಿಂದ ಅಥವಾ ಇತರ ದೇಶಗಳಿಂದ ಕುಮೈಟ್‌ಗೆ ಆಗಮಿಸುವ ಎಲ್ಲಾ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ. ದೇಶೀಯ ಉದ್ಯೋಗಿಗಳ ಹಾಗೂ ಕುವೈಟ್‌ ನಾಗರಿಕರ ಸಂಚಾರಕ್ಕೆ ಅವಕಾಶವಿದೆ. ಸರಕು ಸಾಗಣೆ ವಿಮಾನ ಸಂಚಾರಕ್ಕೆ ನಿರ್ಬಂಧವಿಲ್ಲ” ಎಂದು ವರದಿ ಹೇಳಿದೆ.

ಭಾರತದಿಂದ ಆಗಮಿಸುವ ವಿಮಾನಗಳಿಗೆ ಈಗಾಗಲೇ ಇಂಗ್ಲೆಂಡ್‌‌, ಕೆನಡಾ, ಯುಎಇ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಈ ಪಟ್ಟಿಗೆ ಕುವೈತ್ ಕೂಡ ಸೇರ್ಪಡೆಯಾಗಿದೆ.



Join Whatsapp