ಬಿಜೆಪಿಯನ್ನು ಕಿತ್ತೊಗೆದ ದಿನ ದೇಶ ನೈಜ ವಾಕ್ಸಿನೇಟ್ ಅಗುವುದು : ನಟ ಸಿದ್ಧಾರ್ಥ್

Prasthutha|

ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದ ದಿನವೇ ದೇಶವು ನಿಜವಾದ ವ್ಯಾಕ್ಸಿನೇಟ್ ಆಗುವುದೆಂದು ಟ್ವೀಟ್ ಮಾಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುವುದು ಎಂಬ ಬಿಜೆಪಿಯ ಹೇಳಿಕೆಯನ್ನು ನಟ ಸಿದ್ಧಾರ್ಥ್ ಅಪಹಾಸ್ಯ ಮಾಡಿದ್ದಾರೆ.

- Advertisement -

 ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಗುವುದು ಎಂಬ ಬಿಜೆಪಿಯ ಹೇಳಿಕೆಯನ್ನು ರಿಟ್ವೀಟ್ ಮಾಡುವ ಮೂಲಕ ಸಿದ್ಧಾರ್ಥ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

https://twitter.com/Actor_Siddharth/status/1385660881531392000

“ಒಂದು ದಿನ ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆದಾಗ ಈ ದೇಶವು ನಿಜವಾಗಿಯೂ ವ್ಯಾಕ್ಸಿನೇಟ್ ಆಗುವುದು. ಆ ದಿನ ಕೂಡಿ ಬರಲಿದೆ. ಕನಿಷ್ಠ ಪಕ್ಷ ಈ ಟ್ವೀಟ್ ಅನ್ನು ನಿಮಗೆ ನೆನಪಿಸಲಾದರೂ ನಾವು ಆ ಸಮಯದಲ್ಲಿ ಇಲ್ಲಿಯೇ ಇರಲಿದ್ದೇವೆ” ಎಂದು ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.

Join Whatsapp