ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಬರಲಿಲ್ಲವೆಂಬ ಕಾರಣದಿಂದ ಕೋವಿಡ್ ಪೀಡಿತ ಮಗ ಮತ್ತು ಆತನ ತಾಯಿಯನ್ನು ರಸ್ತೆಯಲ್ಲಿ ಮಲಗಿಸಿದ ಘಟನೆ ಅಹಮದಾಬಾದ್‌ನ ಸರಸ್‌ಪುರದ ಶಾರದಾಬೆನ್ ಆಸ್ಪತ್ರೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಮಲಗಿದ ಕೋವಿಡ್ ಸೋಂಕಿತ ಮಗ ಮತ್ತು ಹತ್ತಿರ ಕುಳಿತಿರುವ ತಾಯಿಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.
108 ಆಂಬ್ಯುಲೆನ್ಸ್‌ನಲ್ಲಿ ಕೋವಿಡ್‌ನಿಂದ ಬಳಲುತ್ತಿದ್ದ ಮಗನನ್ನು ಆಸ್ಪತ್ರೆಗೆ ಸಾಗಿಸಲು ತಾಯಿಗೆ 108 ಆಂಬ್ಯುಲೆನ್ಸ್ ಲಭ್ಯವಾಗಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅಧಿಕಾರಿಗಳು ಅವರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಶಾರದಾಬೆನ್ ಆಸ್ಪತ್ರೆಯನ್ನು ಇತ್ತೀಚೆಗೆ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು.
ರಾಜ್ಯದ ಕೋವಿಡ್ ಪ್ರೋಟೋಕಾಲ್ ಪ್ರಕಾರ, ಶಾರದಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೋವಿಡ್ 108 ಆಂಬುಲೆನ್ಸ್‌ಗಳಲ್ಲಿ ಬರಬೇಕಾಗಿದೆ. ಇದಲ್ಲದೆ, ಕೋವಿಡ್ ಚಿಕಿತ್ಸೆ ಪಡೆಯಲು ಬಂದ ರೋಗಿಯ ಕೈಯಲ್ಲಿ ಕೋವಿಡ್ ದೃಢಪಟ್ಟ ಬಗ್ಗೆ ವರದಿಗಳು ಇರಲಿಲ್ಲ. ಈ ವಿಷಯವನ್ನು ರೋಗಿಯ ಮತ್ತು ಅವರ ಸಂಬಂಧಿಕರ ಗಮನಕ್ಕೆ ತರಲಾಗಿದೆ ಎಂದು ಅಹಮದಾಬಾದ್ ಮಹಾನಗರ ಪಾಲಿಕೆಯ ಪ್ರತಿನಿಧಿ ತಿಳಿಸಿದ್ದಾರೆ.
ಕೋವಿಡ್ ಕಾಯಿಲೆ ಇದೆ ಎಂದು ಶಂಕಿಸಲಾಗಿರುವವರಿಗೆ ದಾಖಲಿಸಲು ಶಾರದಾಬೆನ್ ಆಸ್ಪತ್ರೆಯಲ್ಲಿ ಯಾವುದೇ ವಿಶೇಷ ವಾರ್ಡ್ ಸ್ಥಾಪಿಸಲಾಗಿಲ್ಲ ಎಂದು ರೋಗಿಯ ಬಳಿ ಕೋವಿಡ್ 19 ವರದಿಯೊಂದಿಗೆ ಆಂಬ್ಯುಲೆನ್ಸ್‌ನಲ್ಲಿ ಬರಲು ತಿಳಿಸಲಾಗಿತ್ತು. ಆದರೆ ಅವರು ಹೊರಗೆ ಬಂದು ವಿಡಿಯೋ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ನಂತರ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆಯೇ ಎಂಬ ಪ್ರಶ್ನೆಗೆ ಆಸ್ಪತ್ರೆಯ ಅಧಿಕಾರಿಗಳು ಉತ್ತರಿಸಲಿಲ್ಲ.