ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಮೋದಿಗೆ ಯಾವುದೇ ಹಕ್ಕು ಇಲ್ಲ : SDPI

Prasthutha|

ಹೊಸದಿಲ್ಲಿ : ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟುವಲ್ಲಿ ವಿಫಲರಾದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯುವ ಎಲ್ಲಾ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)  ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಟೀಕಿಸಿದ್ದಾರೆ.

- Advertisement -

ಮೋದಿ, ಪ್ರಧಾನ ಮಂತ್ರಿಗಳ ಗೌರವಾನ್ವಿತ ಹುದ್ದೆಗೆ ಅನರ್ಹರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ದೇಶವು ತೀವ್ರ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಾ, ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿರುವಾಗ “ ರೋಮ್ ಹೊತ್ತಿ ಉರಿಯುತ್ತಿದ್ದಾಗ ರೋಮ್ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ’ ಎಂಬಂತೆ ಮೋದಿ ಬೃಹತ್ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದರು ಮತ್ತು ಸೇರಿದ ಜನಸ್ತೋಮವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಫೈಝಿ ವ್ಯಂಗ್ಯವಾಡಿದ್ದಾರೆ.

ಕೋವಿಡ್ 19 ಸೋಂಕು ಹರಡುವಿಕೆ ಮತ್ತು ಸಾವುಗಳು ವಿಶೇಷವಾಗಿ ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಇದುವರೆಗಿನ ಎಲ್ಲಾ ಮಿತಿಗಳನ್ನು ದಾಟಿದೆ. ಈ ರಾಜ್ಯಗಳ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಮರ್ಪಕ ರೀತಿಯಲ್ಲಿ ಬೆಡ್ ಅಥವಾ ಆಮ್ಲಜನಕ ಪೂರೈಕೆಗೆ ವ್ಯವಸ್ಥೆ ಇಲ್ಲದೆ ಸಾವುಗಳ ನಿಯಂತ್ರಣ ಕೈತಪ್ಪುತ್ತಿವೆ. ಗುಜರಾತ್‌ನ ಶ್ಮಶಾನದಲ್ಲಿ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ನಿರಂತರವಾಗಿ ಮೃತದೇಹಗಳನ್ನು ಸುಟ್ಟ ಪರಿಣಾಮ ಅನಿಲ ಮತ್ತು ಉರುವಲು ಕುಲುಮೆಗಳ ಲೋಹದ ಭಾಗಗಳು ಕೂಡ ಕರಗಲಾರಂಭಿಸಿವೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಬಗ್ಗೆ ಯಾವುದೇ ಆಲೋಚನೆಯಿಲ್ಲದೆ ಕೇಂದ್ರ ಸರ್ಕಾರ ಮತ್ತು ಈ ರಾಜ್ಯಗಳಲ್ಲಿನ ಸರ್ಕಾರಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ಫೈಝಿ ಆರೋಪಿಸಿದ್ದಾರೆ.

- Advertisement -

ಕೊರೊನಾವೈರಸ್ ಎರಡನೇ ಅಲೆ 2020ರ ಅಕ್ಟೋಬರ್ ತಿಂಗಳಲ್ಲೇ ಪತ್ತೆಯಾಗಿತ್ತು. ಆದರೆ ಆರೋಗ್ಯ ಅಧಿಕಾರಿಗಳು ಸೋಂಕು ಹರಡುವಿಕೆಯ ತಡೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, ಮಂತ್ರಿಗಳು, ಅವರ ಗುಲಾಮರು ಮತ್ತು ಭಟ್ಟಂಗಿಗಳು ಕೋವಿಡ್ 19 ವಿರುದ್ಧ “ಯಶಸ್ವಿ ಯುದ್ಧ” ಗೆದ್ದಿದ್ದಕ್ಕಾಗಿ ಮೋದಿಯನ್ನು ಕುರುಡಾಗಿ ಹೊಗಳುವಲ್ಲಿ ನಿರತರಾಗಿದ್ದರು. ಮಾರ್ಚ್ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ದೇಶವನ್ನು ಕೋವಿಡ್ -19 ಸಾಂಕ್ರಾಮಿಕ ರೋಗ ಮುಕ್ತಗೊಳ್ಳುವ ಹಂತದಲ್ಲಿದೆ ಎಂದು ಘೋಷಿಸಿ ಬಿಟ್ಟರು. ಮೋದಿಯ ನಾಯಕತ್ವವನ್ನು “ಅಂತಾರಾಷ್ಟ್ರೀಯ ಸಹಕಾರದಲ್ಲಿ ಜಗತ್ತಿಗೆ ಉದಾಹರಣೆ” ಎಂದು ಅವರು ಮೋದಿಯನ್ನು ಹೊಗಳುವುದರಲ್ಲಿ ನಿರತರಾದರು. ಮಾತ್ರವಲ್ಲ ಮೋದಿಯನ್ನು “ಲಸಿಕೆ ಗುರು” ಎಂದು ಹೊಗಳಿ ಆಕಾಶಕ್ಕೆತ್ತರಕ್ಕೆ ಏರಿಸಿಬಿಟ್ಟರು. ಭಾರತವು “ಲಸಿಕೆ ರಾಜತಾಂತ್ರಿಕತೆಯ” ಭಾಗವಾಗಿ ವಿದೇಶಗಳಿಗೆ ಲಸಿಕೆಗಳನ್ನು ಕಳುಹಿಸಿಕೊಡಲು ಪ್ರಾರಂಭಿಸಿ ಅದಕ್ಕೂ ಭಾರೀ ಪ್ರಚಾರ ನೀಡಲಾಯಿತು.

ಆದರೆ ಒಂದು ತಿಂಗಳೊಳಗೆ ಪರಿಸ್ಥಿತಿ ಬದಲಾಯಿತು. ದಿನದ ಸರಾಸರಿ ಸೋಂಕುಗಳ ಪ್ರಮಾಣ ಏಪ್ರಿಲ್ ಮಧ್ಯದ ವೇಳೆಗೆ ದಿನಕ್ಕೆ 1,00,000ಕ್ಕೆ ಏರಿಕೆ ಕಂಡಿತು. ಕಳೆದ ಭಾನುವಾರ, ದೇಶದಲ್ಲಿ 270,000 ಕ್ಕೂ ಹೆಚ್ಚು ಪ್ರಕರಣಗಳು ಮತ್ತು 1,600 ಕ್ಕೂ ಹೆಚ್ಚು ಸಾವುಗಳು ದಾಖಲಾದವು. ‘ದಿ ಲ್ಯಾನ್ಸೆಟ್ ಕೋವಿಡ್ -19 ಆಯೋಗದ’ ವರದಿಯ ಪ್ರಕಾರ, ಸೋಂಕನ್ನು ಸರಿಯಾಗಿ ಪರೀಕ್ಷಿಸಿ ನಿಯಂತ್ರಿಸದಿದ್ದರೆ, ಜೂನ್ ಮೊದಲ ವಾರದ ವೇಳೆಗೆ ದೇಶದಲ್ಲಿ ಪ್ರತಿದಿನ 2300 ಕ್ಕೂ ಹೆಚ್ಚು ಸಾವು ಸಂಭವಿಸಬಹುದು ಎಂದು ಎಚ್ಚರಿಸಿದೆ.

ಕೋವಿಡ್ 19 ಎರಡನೇ ಅಲೆಯ ಹೊಡೆತವನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಕೇಂದ್ರ ಸರ್ಕಾರವು ಪರಿಗಣಿಸಲು ಏಳು ತಿಂಗಳುಗಳನ್ನು ತೆಗೆದುಕೊಂಡಿತು. ಇದರ ನಂತರವಷ್ಟೇ ಇದು ದೇಶದ 150 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಿಸುವ ಸ್ಥಾವರಗಳನ್ನು ಸ್ಥಾಪಿಸಲು ಟೆಂಡರ್‌ಕರೆಯಲು ಪ್ರಾರಂಭಿಸಿತು. ಸ್ಥಾಪಿಸಲಾದ 11 ಸ್ಥಾವರಗಳಲ್ಲಿ, ಕೇವಲ ಐದು ಘಟಕಗಳು ಪ್ರಸ್ತುತ ಚಾಲನೆಯಲ್ಲಿವೆ. ಕೋವಿಡ್ ರೋಗಿಗಳು ಸುಗಮ ಉಸಿರಾಟಕ್ಕೆ ಆಮ್ಲಜನಕವನ್ನು ಪಡೆಯಬೇಕಾಗಿದ್ದು, ಇದು ಗಾಳಿಯಿಂದ ಅನಿಲವನ್ನು ನಿಮಿಷಕ್ಕೆ 130 ಲೀಟರ್ ಗಳಷ್ಟು ಫಿಲ್ಟರ್ ಮಾಡುತ್ತದೆ. ಆದರೆ ಕಳೆದ ಎರಡು ತಿಂಗಳುಗಳಲ್ಲಿ ಭಾರತದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾಕಷ್ಟು ಪ್ರಮಾಣದ ಆಮ್ಲಜನಕ ಪೂರೈಕೆಯಿಲ್ಲದೆ ರೋಗಿಗಳು ಹೆಣಗಾಡುತ್ತಿದ್ದಾರೆ.

ಸಾಂಕ್ರಾಮಿಕ ಬಿಕ್ಕಟ್ಟು ಮತ್ತು ಲಸಿಕೆ ಅಭಿಯಾನವನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ದೇಶದಲ್ಲಿ ಭಾರೀ ಲಸಿಕೆ ಕೊರತೆ ಎದುರಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಎಲ್ಲಿಂದ ಅಥವಾ ಯಾವಾಗ ಲಭ್ಯವಾಗುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಾಗಿದೆ. ಅತಿ ಹೆಚ್ಚು ಲಸಿಕೆ ನೀಡಿದ ವಿಶ್ವದ ಮೂರನೇ ಅತಿದೊಡ್ಡ ದೇಶ ಎಂಬ ಹೆಗ್ಗಳಿಕೆಯ ಹೊರತಾಗಿಯೂ, ಭಾರತದಲ್ಲಿ ಕೇವಲ 1.3 ಶತಕೋಟಿ ಜನರಿಗೆ ಮಾತ್ರ ಚುಚ್ಚು ಮದ್ದು ನೀಡಲು ಸಾಧ್ಯವಾಗಿದೆ. ವಿಶ್ವದ ಅತಿದೊಡ್ಡ ಲಸಿಕೆ ತಯಾರಕಾ ಸಂಸ್ಥೆಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಭಾರತದ ಒಡೆತನದಲ್ಲಿದೆ. ದೇಶವು ಜಾಗತಿಕವಾಗಿ ಮಾರಾಟವಾಗುವ ಎಲ್ಲಾ ಲಸಿಕೆಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಉತ್ಪಾದಿಸುತ್ತದೆ. ಕಳೆದ ವರ್ಷ ಘೋಷಿಸಿದ ಆರಂಭಿಕ ಒಪ್ಪಂದದ ಪ್ರಕಾರ, ಎಸ್‌ಐಐ 92 ದೇಶಗಳಿಗೆ 200 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುತ್ತದೆ.

ಅತಿಯಾದ ಆತ್ಮವಿಶ್ವಾಸ, ಕೋವಿಡ್ 19 ಓಡಿಸುತ್ತೇವೆಂಬ ಹುಂಬ ಭ್ರಮೆ, ಸಾಂಕ್ರಾಮಿಕ ರೋಗದ ಬಗ್ಗೆ ಸರಿಯಾದ ಅನುಸರಣಾ ಅಧ್ಯಯನಗಳು ಮತ್ತು ಕ್ರಮಗಳ ಕೊರತೆಯಿಂದಾಗಿ, ಸರ್ಕಾರವು ತನ್ನ ನಾಗರಿಕರಿಗೆ ಸಾಕಷ್ಟು ಪ್ರಮಾಣದ ಲಸಿಕೆ ನೀಡುವಲ್ಲಿ ವಿಫಲವಾಗಿದೆ. ಇದು ಲಸಿಕೆ ಸರಬರಾಜಿನಲ್ಲಿ ಕೊರತೆಗೆ ಕಾರಣವಾಯಿತು. ಲಸಿಕೆ ಕೊರತೆ ಬಗ್ಗೆ ರಾಜ್ಯಗಳು ಧ್ವನಿ ಎತ್ತಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿವೆ. ಈಗ, ಮೋದಿಯವರು ರಾಜ್ಯ ಸರ್ಕಾರಗಳನ್ನು ಉತ್ಪಾದಕರಿಂದ ಸ್ವಯಂ-ನಿಗದಿತ ದರದಲ್ಲಿ ನೇರವಾಗಿ ಖರೀದಿಸುವಂತೆ ಕೇಳಿಕೊಂಡಿದ್ದಾರೆ, ಇದರಿಂದಾಗಿ ರಾಜ್ಯಗಳು ಭಾರೀ ಆರ್ಥಿಕ ಹೊರೆಗಳಿಗೆ ಗುರಿಯಾಗುತ್ತವೆ.

 “ಪ್ರತಿಯೊಬ್ಬರೂ ತಮ್ಮ ಜೀವದ ಬಗ್ಗೆ ಜಾಗೃತೆ ವಹಿಸಬೇಕು ಸರ್ಕಾರ ನಿಮಗಾಗಿ ಏನನ್ನೂ ಮಾಡುವುದಿಲ್ಲ”ಎಂಬ ಫೇಸ್ ಬುಕ್ ಪೋಸ್ಟ್ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಟ್ರೋಲ್ ಆಗಿತ್ತು. ಇದು ಪ್ರಸ್ತುತ ದೇಶದ ಸಾಂಕ್ರಾಮಿಕ ಪರಿಸ್ಥಿತಿಯು ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಅಸಮರ್ಥತೆಗೆ ಸಾಕ್ಷಿಯಾಗಿದೆ, ಆದ್ದರಿಂದ ಮೋದಿಯವರು ಪ್ರಧಾನಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಈ ಮೂಲಕ ದೇಶ ಮತ್ತು ಅದರ ಜನರನ್ನು ಉಳಿಸಬೇಕು ಎಂದು ಫೈಝಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.



Join Whatsapp