ಗ್ರಾಹಕರೇ ಗಮನಿಸಿ | ಇಂದಿನಿಂದ ಬ್ಯಾಂಕ್ ಸೇವಾವಧಿಯಲ್ಲಿ ವ್ಯತ್ಯಯ

Prasthutha|

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿರುವುದರಿಂದಾಗಿ ರಾಜ್ಯ ಸರ್ಕಾರದ ನೂತನ ಮಾರ್ಗಸೂಚಿ ಅನ್ವಯ ಬ್ಯಾಂಕ್ ವ್ಯವಹಾರಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ.

- Advertisement -

ನಾಳೆಯಿಂದ ಮೇ 31ರವರೆಗೂ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ಬ್ಯಾಂಕ್ ವ್ಯವಹಾರಗಳು ನಡೆಯಲಿದ್ದು, ಪ್ರತಿದಿನ ಶೇ. 50ರಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ.

ಲೀಡ್ ಬ್ಯಾಂಕ್ ಮಾರ್ಗಸೂಚಿಯ ಪ್ರಕಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಕೆಲಸದ ಸಮಯವನ್ನು 10ರಿಂದ 4ಗಂಟೆಯವರೆಗೆ ನಿರ್ವಹಿಸಬಹುದಾಗಿದೆ. ಇಂದಿನಿಂದ ಮೇ.31ರವರೆಗೂ ಇದು ಜಾರಿಯಲ್ಲಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳ ಹಿತದೃಷ್ಟಿಯಿಂದ ಶೇ.50ರಷ್ಟು ಸಿಬ್ಬಂದಿಗಳು ಬದಲಿ ದಿನದಂತೆ ಕಾರ್ಯನಿರ್ವಹಿಸಲು ಅವಕಾಶವನ್ನು ನೀಡಲಾಗಿದೆ.

- Advertisement -

ನಗದು ವ್ಯವಹಾರ, ಚೆಕ್ ಕ್ಲಿಯರಿಂಗ್ ಸೇವೆಗಳು ಹಾಗೂ ಹಣ ಪಾವತಿ ಮಾಡುವಂತಹ ಸೇವೆಗಳಿಗೆ ಮಾತ್ರ ಮೇ.31ರವರೆಗೂ ಆದ್ಯತೆ ಇರುತ್ತದೆ. ವ್ಯವಹಾರದ ಅವಧಿಯಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಝ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಮಾರ್ಗ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಎಟಿಎಂ ಮೂಲಕ ಹಣದ ವ್ಯವಹಾರಕ್ಕೆ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಮೇ 31ರವರೆಗೆ ಪ್ರತಿ ಶನಿವಾರ ಹಾಗೂ ಭಾನುವಾರ ಬ್ಯಾಂಕ್ ರಜೆಯಿರುತ್ತದೆ.

Join Whatsapp