ಬಹುಮಾನದ ಅರ್ಧದಷ್ಟು ಹಣವನ್ನು ತಾನು ರಕ್ಷಿಸಿದ ಬಾಲಕನಿಗೆ ನೀಡಲಿದ್ದೇನೆ : ಮಯೂರ್ ಶೆಲ್ಕೆ

Prasthutha|

►ರೈಲ್ವೇ ಹಳಿಗೆ ಬಿದ್ದ ಬಾಲಕನನ್ನು ರಕ್ಷಿಸಿ ದೇಶದಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದ ರೈಲ್ವೇ ಸಿಬ್ಬಂದಿ

- Advertisement -

ರೈಲ್ವೆ ಇಲಾಖೆ ನೀಡಿದ 50,000 ರೂಪಾಯಿ ಬಹುಮಾನದ ಅರ್ಧದಷ್ಟು ಹಣವನ್ನು ರೈಲ್ವೇ ಹಳಿಯಲ್ಲಿ ಬಿದ್ದ ಬಾಲಕ ಮತ್ತು ಆತನ ಕುರುಡು ತಾಯಿಗೆ ನೀಡಲು ಮಯೂರ್ ಶೆಲ್ಕೆ ನಿರ್ಧರಿಸಿದ್ದಾರೆ. ಹೀಗಾಗಿ, ಮಯೂರ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

‘ಕೋವಿಡ್ ನಿಂದಾಗಿ ಎಲ್ಲರೂ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ನನಗೆ ನಗದು ಉಡುಗೊರೆಯನ್ನು ನೀಡುವವರು ಅದನ್ನು ಚೆಕ್ ಆಗಿ ನೀಡಿದರೆ ಬಾಲಕನಿಗೆ, ಬಾಲಕನ ತಾಯಿ ಮತ್ತು ಅರ್ಹ ಬಡ ಕುಟುಂಬಗಳಿಗೆ ಹಸ್ತಾಂತರಿಸಲಿದ್ದೇನೆ’ ಎಂದು ಮಯೂರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರೈಲ್ವೇ ಇಲಾಖೆ ನೀಡುವ ಮೊತ್ತದ ಅರ್ಧದಷ್ಟು ಹಣವನ್ನು ಬಾಲಕನ ಕುಟುಂಬಕ್ಕೆ ನೀಡಲಿದ್ದೇನೆ ಎಂದು ರೈಲ್ವೇ ಪಾಯಿಂಟ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಮಯೂರ್ ಹೇಳಿದ್ದಾರೆ.

- Advertisement -

ಮುಂಬೈನ ವಂಗಾನಿ ರೈಲು ನಿಲ್ದಾಣದಲ್ಲಿ ಅಂಧ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗನೊಂದಿಗೆ ರೈಲು ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಾಲಕ ಆಯತಪ್ಪಿ ಹಳಿ ಮೇಲೆ ಬಿದ್ದಿದ್ದ. ಅಷ್ಟರಲ್ಲಿ ರೈಲು ಕೂಡಾ ನಿಲ್ದಾಣ ಪ್ರವೇಶಿಸಿ ಆಗಿತ್ತು. ದೃಷ್ಟಿದೋಷ ಇದ್ದ ತಾಯಿಗೆ ಏನು ಮಾಡುವುದೆಂದೇ ಗೊತ್ತಾಗದೆ ಅಸಹಾಯಕರಾಗಿ ರೋದಿಸುತ್ತಿದ್ದರು. ಈ ವೇಳೆ, ಅರೆಕ್ಷಣವೂ ವ್ಯರ್ಥ ಮಾಡದೆ ರೈಲಿಗೆ ವಿರುದ್ಧವಾಗಿ ಹಳಿ ಮೇಲೆಯೇ ಓಡಿ ಬಂದಿದ್ದ ಮಯೂರ್ ಬಾಲಕನನ್ನು ರಕ್ಷಿಸಿ ಕೂದಲೆಳೆ ಅಂತರದಲ್ಲಿ ರೈಲಿನಿಂದ ಪಾರಾಗಿದ್ದರು. ಮಯೂರ್ ಶೆಲ್ಕೆ ಮಗುವನ್ನು ರಕ್ಷಿಸಿ ಫ್ಲಾಟ್‌ಫಾರ್ಮ್‌ ಮೇಲೆ ಹತ್ತುವುದಕ್ಕೂ ರೈಲು ಅಲ್ಲೇ ಸಾಗುವ ಸಮಯಕ್ಕೂ ತುಂಬಾ ಅಂತರವೇನು ಇರಲಿಲ್ಲ. ಆ ಸಮಯದ ಶೆಲ್ಕೆ ಅವರ ಸಮಯ ಪ್ರಜ್ಞೆಯು ದೇಶಾದ್ಯಂತ ಭಾರೀ ಪ್ರಶಂಷೆಗೆ ಪಾತ್ರವಾಗಿತ್ತು.

Join Whatsapp