ಲುಲು M A ಯೂಸುಫ್ ಅಲಿಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ | ಪ್ರಾಣಾಪಾಯದಿಂದ ಪಾರು

Prasthutha|

ಕೊಚ್ಚಿ : ಲುಲು ಸಮೂಹ ಸಂಸ್ಥೆಗಳ ಉದ್ಯಮಿ ಎಂ ಎ ಯೂಸುಫ್ ಅಲಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೊಚ್ಚಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಖಾಸಗಿ ಸ್ಥಳದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಕೊಚ್ಚಿ ಸಮೀಪದ ಪಣಂಗಾಡ್ ಎಂಬಲ್ಲಿ ಈ ಘಟನೆ ನಡೆದಿದ್ದು, ಯೂಸೂಫ್ ಅಲಿಯವರ ಜೊತೆ ಅವರ ಹೆಂಡತಿ ಕೂಡಾ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

- Advertisement -

ಅಲಿಯವರು ತಮ್ಮ ಮನೆಯಿಂದ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಅಲಿ, ಪತ್ನಿ ಮತ್ತು ಪೈಲಟ್ ರನ್ನು ವೈದ್ಯಕೀಯ ತಪಾಸಣೆಗಾಗಿ ಸಮೀಪದ ಕೊಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ

Join Whatsapp