ಮಂಜೇಶ್ವರದಲ್ಲಿ ಕಾಂಗ್ರೆಸ್ಸಿನ ಪರಂಪರಾಗತ ಮತಗಳು ಈ ಬಾರಿ ಬಿಜೆಪಿಗೆ ಬಿದ್ದಿದೆ : ಮುಸ್ಲಿಮ್ ಲೀಗ್ ಶಂಕೆ !

Prasthutha|

►ವಿಜಯ ಪತಾಕೆ ಹಾರಿಸಲಿದೆಯೇ ಬಿಜೆಪಿ ?

- Advertisement -

ಮಂಜೇಶ್ವರ : ಕೇರಳ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಜಯಿಸಲು ವಿಶ್ವಾಸವಿಟ್ಟಿರುವ ಒಂದು ಕ್ಷೇತ್ರವಾಗಿದೆ ಕರ್ನಾಟಕ –ಕೇರಳ ಗಡಿ ಪ್ರದೇಶದ ಮಂಜೇಶ್ವರ ವಿಧಾನಸಭಾ ಕ್ಷೇತ್ರ. ಇಲ್ಲಿ ಈ ಬಾರಿ ಯುಡಿಎಫ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಚುನಾವಣೆ ನಡೆದ ಬಳಿಕ ಮುಸ್ಲಿಮ್ ಲೀಗ್, ತನ್ನ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ಸಿನಿಂದ ತನಗೆ ದೊರೆಯುತ್ತಿದ್ದ ಪರಂಪರಾಗತ ಮತಗಳು ಈ ಬಾರಿ ಬಿಜೆಪಿ ಪಾಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಪಕ್ಷದ ಹೆಚ್ಚಿನ ಪ್ರಭಾವವಿರುವ ಪ್ರದೇಶಗಳಾದ ವರ್ಕಾಡಿ, ಪೈವಳಿಕೆ, ಪುತ್ತಿಗೆ, ಮೀಂಜ ಪಂಚಾಯತಿನ ಕಾಂಗ್ರೆಸ್ಸಿನ ಬಹುತೇಕ ಮತಗಳು ಬಿಜೆಪಿ ಪಾಲಾಗಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಕಳೆದ 15 ವರ್ಷಗಳಿಂದ ಮೀಂಜ ಪಂಚಾಯತ್ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಬಾರಿ ಸೋಲೊಪ್ಪಿಕೊಂಡಿತ್ತು. ವರ್ಕಾಡಿ ಮತ್ತು ಪೈವಳಿಕೆ ಪಂಚಾಯತನ್ನೂ ಕಾಂಗ್ರೆಸ್ ಕಳೆದುಕೊಂಡಿದೆ. ಇದರ ಹಿಂದೆ ಯುಡಿಎಫ್ ಅಭ್ಯರ್ಥಿ ಇದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು.

- Advertisement -

ಇದಿಷ್ಟು ಮಾತ್ರವಲ್ಲದೆ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಬಾರಿಯ ಮಂಜೇಶ್ವರ ಪ್ರಚಾರ ಕಣಕ್ಕೆ ಪಕ್ಕದ ಕರ್ನಾಟಕ ರಾಜ್ಯದಿಂದ ಯಾವೊಬ್ಬ ಹಿರಿಯ ಕಾಂಗ್ರೆಸ್ ನಾಯಕರು ಆಗಮಿಸಿರಲಿಲ್ಲ. ಕೊನೆಯ ಕ್ಷಣದ ಒತ್ತಡಕ್ಕೆ ಮಣಿದು ಡಿಕೆಶಿಯವರು ರೋಡ್ ಶೋ  ನಡೆಸುತ್ತಾರೆಂದು ಪ್ರಚಾರ ಮಾಡಲಾಯಿತಾದರೂ, ಅಲ್ಲಿ ಧಾರ್ಮಿಕ ಗುರುಗಳಾಗಿದ್ದ ಆಲಿಕುಕುಂಞಿ ಉಸ್ತಾದರ ನಿಧನದಿಂದಾಗಿ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಈ ಎಲ್ಲಾ ಗೊಂದಲಗಳು ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಮೊದಲ ಬಾರಿ ತನ್ನ ವಿಜಯ ಪತಾಕೆ ಹಾರಿಸಲಿದೆಯೇ ಎನ್ನುವ ಪ್ರಶ್ನೆಗೆ ಮೇ 2ರ ವರೆಗೆ ಕಾಯಬೇಕಾಗುತ್ತದೆ.



Join Whatsapp