ಸಾರಿಗೆ ನೌಕರರಿಗೆ ಮತ್ತೊಂದು ಶಾಕ್‌ | 60 ತರಬೇತಿ, 58 ಪ್ರೊಬೇಷನರಿ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿದ BMTC

Prasthutha|

ಬೆಂಗಳೂರು :‌ ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ನೌಕರರಿಗೆ ಬಿಎಂಟಿಸಿ ಮತ್ತೊಂದು ಶಾಕ್‌ ನೀಡಿದ್ದು, ಇಂದು 60 ತರಬೇತಿ ನೌಕರರು, 58 ಪ್ರೊಬೇಷನರಿ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿದೆ.

ಕೆಲವು ತರಬೇತಿ ಮತ್ತು ಪ್ರೊಬೇಷನರಿ ಉದ್ಯೋಗಿಗಳಿಗೆ 7.04.2021 ಮತ್ತು 08.04.2021 ರಂದು ಹೊರಡಿಸಲಾದ ಬಿಎಂಟಿಸಿ ಪೇಪರ್ ಅಧಿಸೂಚನೆಯನ್ನು ಉಲ್ಲೇಖಿಸಿ, 60 ತರಬೇತಿ ನೌಕರರು ಮತ್ತು 58 ಪ್ರೊಬೇಷನರಿ ಉದ್ಯೋಗಿಗಳನ್ನು ಇಂದು ಅವರ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

- Advertisement -

ನಿನ್ನೆಯೂ ಕೂಡ ಬಿಎಂಟಿಸಿ 7.04.2021 ಮತ್ತು 08.04.2021 ರಂದು ಹೊರಡಿಸಲಾದ ಅಧಿಸೂಚನೆಯನ್ನು ಉಲ್ಲೇಖಿಸಿ 60 ತರಬೇತಿ ನೌಕರರು ಮತ್ತು 60 ಪ್ರೊಬೇಷನರಿ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು.

- Advertisement -