‘ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಹೇಳಿದ ವಿಜ್ಞಾನಿಯನ್ನೊಮ್ಮೆ ನಮಗೂ ತಿಳಿಸಿಕೊಡಿ’ : ಡಿಕೆಶಿ ವ್ಯಂಗ್ಯ
Prasthutha: April 10, 2021

ಬೆಳಗಾವಿ : ಕೋವಿಡ್ ಹಗಲಲ್ಲಿ ಹರಡುವುದಿಲ್ಲ, ರಾತ್ರಿ ಮಾತ್ರ ಹರಡುತ್ತದೆ ಎಂದು ಯಾವ ವಿಜ್ಞಾನಿ ಹೇಳಿದರೂ ನಮಗೆ ತಿಳಿಸಿದರೆ ಅವರ ಫೋಟೊವನ್ನು ನಾವೂ ಇಟ್ಟುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ರಾಜ್ಯ ಸರಕಾರ ರಾತ್ರಿ ಕರ್ಫ್ಯೂ ಮಾಡಿ ಆರ್ಥಿಕತೆ ಹಾಳು ಮಾಡುತ್ತಿದೆ. ರಾತ್ರಿ ಕರ್ಫ್ಯೂ ಮಾಡಿ ಜನರನ್ನು ಮಾನಸಿಕವಾಗಿ ಕುಂದಿಸುತ್ತಿದ್ದಾರೆ. ಹಗಲಲ್ಲಿ ಕೋವಿಡ್ ಹರಡುವುದಿಲ್ಲವೇ? ಇವೆಲ್ಲ ಅವೈಜ್ಞಾನಿಕ ನಿರ್ಧಾರಗಳು ಎಂದು ಬಿಜೆಪಿ ವಿರಿದ್ಧ ಡಿಕೆಶಿ ಹರಿಹಾಯ್ದಿದ್ದಾರೆ.
ಲಕ್ಷ್ಮಣ ಸವದಿ ಸಾರಿಗೆ ಮಂತ್ರಿ ಆದಾಗಿನಿಂದ ಕೈಗೊಂಡ ನಿರ್ಧಾರಗಳು ಸರಿಯಿಲ್ಲ. ನೌಕರರು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಮೊದಲು ಆ ನೌಕರರಿಗೆ ಸಂಬಳ ಕೊಡುವುದಕ್ಕೆ ಹೇಳಿ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಿಡಿಕಾರಿದ್ದಾರೆ.
