ಇಂದಿನಿಂದ ಜಾರಿಯಾಗಲಿದೆ ಕೊರೋನಾ ಕರ್ಫ್ಯೂ | ಏನು ಅನುಮತಿಸಲಾಗಿದೆ?, ಏನನ್ನು ನಿಷೇಧಿಸಲಾಗಿದೆ?

Prasthutha|

ಬೆಂಗಳೂರು : ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ನಡುವೆ, ಇಂದು ರಾತ್ರಿಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಏಳು ನಗರಗಳಲ್ಲಿ ‘ಕೊರೊನಾ’ (ರಾತ್ರಿ) ಕರ್ಫ್ಯೂ ಹೇರಲಾಗುವುದು. ರಾತ್ರಿ ಕರ್ಫ್ಯೂ ಏಪ್ರಿಲ್ 20ರವರೆಗೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ. ಇದಲ್ಲದೆ, ಬೆಂಗಳೂರು, ಕರ್ನಾಟಕದ ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕೂರು, ಉಡುಪಿ ಜಿಲ್ಲೆಗಳಲ್ಲಿಯೂ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರಲಿದೆ.

- Advertisement -

ನಿನ್ನೆ ಬೆಂಗಳೂರಿನಲ್ಲಿ ಒಂದೆ ದಿನ 5,576 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗುವ ಮೂಲಕ ಈ ವರ್ಷದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿನ ಪ್ರಕರಣಗಳು ದಾಖಲಿಸಿದೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4,70,014 ಕ್ಕೆ ಏರಿದೆ.ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನ 29 ರೋಗಿಗಳು ಸೇರಿದಂತೆ ರಾಜ್ಯದಲ್ಲಿ 46 ರೋಗಿಗಳು ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಮಾರ್ಚ್ ನಿಂದ ಕೊರೋನಾ ಕಾಣಿಸಿಕೊಂಡ ನಂತರ ರಾಜ್ಯದ ಸಾವಿನ ಸಂಖ್ಯೆ 12,813 ಕ್ಕೆ ಏರಿದೆ. ಬೆಂಗಳೂರು ನಗರದ ಸಂಖ್ಯೆ 4,769 ಕ್ಕೆ ಏರಿದೆ. ತೀವ್ರ ನಿಗಾ ಘಟಕಗಳಲ್ಲಿನ (ಐಸಿಯು) 378 ರೋಗಿಗಳಲ್ಲಿ 169 ರೋಗಿಗಳು ಬೆಂಗಳೂರು ಆಸ್ಪತ್ರೆಗಳಲ್ಲಿದ್ದಾರೆ.

ಇಂದು ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಕೊರೋನಾ ನೈಟ್ ಕರ್ಪ್ಯೂ ಬೆಂಗಳೂರು ಸೇರಿದಂತೆ 8 ನಗರಗಳಲ್ಲಿ ಜಾರಿಯಾಗಲಿದೆ.

- Advertisement -

ಈ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಏನು ಅನುಮತಿಸಲಾಗಿದೆ?, ಏನನ್ನು ನಿಷೇಧಿಸಲಾಗಿದೆ?

  • ಕರ್ನಾಟಕ ಸರ್ಕಾರವು ಅಗತ್ಯ ಸೇವೆಗಳಿಗೆ 10 ದಿನಗಳ ಕೊರೊನಾ ರಾತ್ರಿ ಕರ್ಫ್ಯೂದಿಂದ ವಿನಾಯಿತಿ ನೀಡಿದೆ.
  • ಸರಕು ವಿತರಣೆ ಮತ್ತು ಇ-ಕಾಮರ್ಸ್ ಕಾರ್ಯಾಚರಣೆಗಳಿಗೆ ಅವಕಾಶ.
  • ಅಗತ್ಯ ಸೇವೆಗಳಿಗೆ ಪ್ರಯಾಣ, ಸರಕು ವಿತರಣೆ ಮತ್ತು ಇ-ಕಾಮರ್ಸ್ ಕಾರ್ಯಾಚರಣೆಗಳಿಗೆ ಅವಕಾಶ ನೀಡಲಾಗುವುದು.
  • ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರು ಮತ್ತು ಅವರ ಪರಿಚಾರಕರಿಗೆ 7 ಗಂಟೆಗಳ ರಾತ್ರಿ ಕರ್ಫ್ಯೂ ಸಮಯದಲ್ಲಿ ಆಸ್ಪತ್ರೆಗಳು ಅಥವಾ ಕ್ಲಿನಿಕ್ ಗಳಿಗೆ ಪ್ರಯಾಣಿಸಲು ಅನುಮತಿಸಲಾಗಿದೆ.
  • ಕರ್ಫ್ಯೂ ಸಮಯದಲ್ಲಿ ವೈದ್ಯಕೀಯ ಮತ್ತು ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ಇತರ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
  • ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೈಗಾರಿಕಾ ಉದ್ಯೋಗಿಗಳಿಗೆ ರಾತ್ರಿ 10 ಗಂಟೆಗೆ ಮೊದಲು ತಮ್ಮ ಕಾರ್ಖಾನೆಗಳನ್ನು ತಲುಪಲು ಮತ್ತು ಬೆಳಿಗ್ಗೆ 5 ಗಂಟೆಯ ನಂತರವೇ ಹೊರಡುವಂತೆ ಕೇಳಲಾಗಿದೆ.
  • ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣದಿಂದ ಕರ್ಫ್ಯೂ ಸಮಯದಲ್ಲಿ ಪ್ರಯಾಣಿಸುವ ಜನರು ತಮ್ಮ ಮನೆಗೆ ತಲುಪಲು ಅನುಮತಿಸಲು ಪೊಲೀಸರಿಗೆ ಪ್ರಯಾಣದ ಪುರಾವೆಯಾಗಿ ಟಿಕೆಟ್ ಗಳನ್ನು ತೋರಿಸಬೇಕಾಗುತ್ತದೆ.
  • ರಾತ್ರಿ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿರುವುದು ಕಂಡುಬಂದ ಜನರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005, ಐಪಿಸಿ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ದಂಡ ವಿಧಿಸಲಾಗುತ್ತದೆ.

ಸರಕಾರದ ಈ ನಿರ್ಧಾರವನ್ನು ‘ಅವೈಜ್ಞಾನಿಕ’ ಎಂದು ಬಣ್ಣಿಸಿರುವ ಬೃಹತ್ ಬೆಂಗಳೂರು ಹೋಟೆಲಿಯರ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್, ಸಾಮಾನ್ಯವಾಗಿ ಹೋಟೆಲ್ ಗಳು, ಬಾರ್ ಗಳು ಮತ್ತು ರೆಸ್ಟೋರೆಂಟ್ ಗಳ ವ್ಯವಹಾರವು ರಾತ್ರಿ 9 ರ ನಂತರ ಪ್ರಾರಂಭಗೊಂಡು ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ. ರಾತ್ರಿ 10 ಗಂಟೆಯ ನಂತರ ಕರ್ಫ್ಯೂ ಜಾರಿಗೊಳಿಸುವ ಸರಕಾರದ ಈ ನಿರ್ಧಾರದಿಂದ ಹಲವಾರು ರೆಸ್ಟೋರೆಂಟ್ ಗಳು ಭಾರೀ ನಷ್ಟವನ್ನು ಅನುಭವಿಸಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.



Join Whatsapp