‘ನನಗೆ ಕರ್ನಾಟಕದಲ್ಲೊಂದು ಮುಖವಿದೆ, ಅದನ್ನು ಇಲ್ಲಿ ಅನಾವರಣಗೊಳಿಸುವುದಿಲ್ಲ’ | ಡಿಎಂಕೆ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ !

Prasthutha|

► ‘ಧೈರ್ಯವಿದ್ದರೆ ನಮ್ಮ ಕಾರ್ಯಕರ್ತರನ್ನು ಮುಟ್ಟಿ ನೋಡಿ’ ;ಕನಿಮೋಳಿ ತಿರುಗೇಟು !

- Advertisement -

ಚೆನ್ನೈ :ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ತಮಿಳುನಾಡಿನ ಅರವಕುರುಚಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮತಯಾಚನೆಯ ವೇಳೆ ಡಿಎಂಕೆಯ ಕಾರ್ಯಕರ್ತರು ಹಿಂಸೆಗೆ ಪ್ರಚೋದಿಸುತ್ತಾರೆ ಎಂದು ಆರೋಪಿಸಿ, ಅವರ ವಿರುದ್ಧ ಬೆದರಿಕೆಯ ಶೈಲಿಯಲ್ಲಿ ಮಾತನಾಡಿದ್ದರು. ಇದಕ್ಕೆಖಾರವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕಿ ಹಾಗೂ ರಾಜ್ಯ ಡಿಎಂಕೆ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿರುವ ಕನಿಮೋಳಿ, “ಡಿಎಂಕೆ ಅಣ್ಣಾಮಲೈಯಂತಹಾ ಹಲವರನ್ನು ನೋಡಿಯಾಗಿದೆ. ಅವರು ತಮ್ಮ ಗಿಮಿಕ್ ಅನ್ನು ಇಲ್ಲಿ ತೋರಿಸುವುದು ಬೇಡ” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ತನ್ನ ಕ್ಷೇತ್ರದ ಮತಯಾಚನೆಯ ವೇಳೆಯ ಭಾಷಣದಲ್ಲಿ ಡಿಎಂಕೆ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಹಲವಾರು ಎಫ್ ಐ ಆ ದಾಖಲಾಗಿದೆ. ಕನಿಮೋಳಿ ಪ್ರಚಾರಕ್ಕೆ ಬಂದಿದ್ದ ವೇಳೆ ಕೂಡಾ ನಮ್ಮ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದನ್ನು ಉಲ್ಲೇಖಿಸುತ್ತಾ ಮಾತನಾಡಿರುವ ಅಣ್ಣಾಮಲೈ “ನಾನು ಡಿಎಂಕೆಯ ಸೆಂಥಿಲ್ ಬಾಲಾಜಿಯ ಮೂಳೆ ಮುರಿಯಬಲ್ಲೆ. ಆದರೆ ಹಿಂಸೆಯನ್ನು ನಾನುಬಯಸುವುದಿಲ್ಲ. ನನಗೆ ಕರ್ನಾಟಕದಲ್ಲಿ ಇನ್ನೊಂದು ಮುಖವಿದೆ. ಅದನ್ನು ನಾನು ಇಲ್ಲಿ ಅನಾವರಣಗೊಳಿಸಲು ಬಯಸುವುದಿಲ್ಲ. ಇದನ್ನು ನೀವು ವೀಡಿಯೋ ಮಾಡಿ ಚುನಾವಣಾ ಆಯೋಗಕ್ಕೆ ನೀಡಿದರೂ ಚಿಂತೆಯಿಲ್ಲ” ಎಂದು ಬಹಿರಂಗವಾಗಿ ಹಲ್ಲೆಯ ಬೆದರಿಕೆ ಒಡ್ಡಿದ್ದರು.

- Advertisement -

ಇದಕ್ಕೆ ಕನಿಮೋಳಿ ಕೂಡಾ ತಕ್ಕ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಅಣ್ಣಾಮಲೈ ಅವರು ತನ್ನ ಕರ್ನಾಟಕದ ಮುಖದ ಬಗ್ಗೆ ಮಾತನಾಡಿದ್ದಾರೆ. ಸೆಂಥಿಲ್ ಬಾಲಾಜಿಯವರಿಗೆ ಥಳಿಸುವ ಬೆದರಿಕೆಯೊಡ್ಡಿದ್ದಾರೆ. ಧೈರ್ಯವಿದ್ದರೆ ನಮ್ಮ ಕಾರ್ಯಕರ್ತರನು ಮುಟ್ಟಿ. ನಮ್ಮನ್ನು ಬೆದರಿಸುವ ತಂತ್ರ ನಮ್ಮ ಮುಂದೆ ನಡೆಯುವುದಿಲ್ಲ” ಎಂದು ಕನಿಮೋಳಿ ಉತ್ತರಿಸಿದ್ದಾರೆ.

ಓರ್ವ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಬಿಜೆಪಿ ಸೇರಿದ ಬಳಿಕದ ಅವರ ಈ ರೀತಿಯ ಅನಾಗರಿಕ ಹೇಳಿಕೆಯ ವಿರುದ್ಧ ಜನರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೇರಿದ ಬಳಿಕ ಅಣ್ಣಾಮಲೈ ಆ ಪಕ್ಷದ ಸಿದ್ಧಾಂತವನ್ನು ಬಹಳ ಚೆನ್ನಾಗಿ ಅನುಸರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.



Join Whatsapp