ಹೊಸದಿಲ್ಲಿ : ಕೊರೋನಾ ವೈರಸ್ ಹರಡುವ ಬಗ್ಗೆ ಮುಸ್ಲಿಮರ ವಿರುದ್ಧ ಸಂಘ ಪರಿವಾರ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಪ್ರಾರಂಭಿಸಿದ್ದ ದ್ವೇಷ ಅಭಿಯಾನವನ್ನು ಪತ್ರಕರ್ತೆ ರಾಣಾ ಅಯ್ಯೂಬ್ ನೆನಪಿಸಿಕೊಂಡಿದ್ದಾರೆ. ಇಂಡಿಯಾ ಟುಡೆ ಪ್ರಕಟಿಸಿದ್ದ ‘ಮುಸ್ಲಿಂ ಟೋಪಿ ಧರಿಸಿದ ಕರೋನಾ ವೈರಸ್’ನ ಚಿತ್ರ ಈಗ ನೆನಪಾಗುತ್ತಿದೆ ಎಂದು ಹೋಳಿ ಆಚರಣೆಯ ವಿಡಿಯೋ ಟ್ವಿಟ್ಟರ್ ನಲ್ಲಿ ಅವರು ಹಂಚಿಕೊಂಡಿದ್ದಾರೆ.
ಕಳೆದ ವರ್ಷದ ಆರಂಭದಲ್ಲಿ ಕೊರೋನಾ ವೈರಸ್ ಹರಡುವ ಬಗ್ಗೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವ್ಯಾಪಕ ಅಭಿಯಾನ ನಡೆದಿತ್ತು. ತಬ್ಲೀಗಿ ಜಮಾಅತ್ ಸಭೆ ನಡೆಸಿರುವುದು ಭಾರತದಲ್ಲಿ ಕೊರೋನಾ ಹರಡಲು ಮುಖ್ಯ ಕಾರಣ ಎಂದು ಸಂಘಪರಿವಾರವನ್ನು ಬೆಂಬಲಿಸಿ ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಇಂಡಿಯಾ ಟುಡೆ ಪ್ರಕಟಿಸಿದ್ದ ‘ಮುಸ್ಲಿಂ ಟೋಪಿ ಧರಿಸಿದ ಕರೋನಾ ವೈರಸ್’ನ ಚಿತ್ರ ಈಗ ನೆನಪಾಗುತ್ತಿದೆ ಎಂದು ಹೋಳಿ ಆಚರಣೆಯ ವಿಡಿಯೋ ಹಂಚಿಕೊಂಡು ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಸರ್ಕಾರ ಮತ್ತು ಮಾಧ್ಯಮಗಳು ತಬ್ಲೀಗಿ ಜಮಾಅತ್ ಅನ್ನು ಬೇಟೆಯಾಡುತ್ತಿತ್ತು ಎಂದು ರಾಣಾ ಅಯ್ಯೂಬ್ ಹೇಳಿದ್ದಾರೆ.