ಹೊಸದಿಲ್ಲಿ : ದೇಶದ ವಿದೇಶಾಂಗ ನ್ಯಾಯ ಮಂಡಳಿ ಮುಂದೆ 1,40,050 ಪ್ರಕರಣಗಳು ಬಾಕಿ ಉಳಿದಿವೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಸಚಿವರು 2020 ರ ಡಿಸೆಂಬರ್ 31ರವರೆಗಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ವಿದೇಶಾಂಗ ವ್ಯವಹಾರಗಳ ನ್ಯಾಯ ಮಂಡಳಿ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬಿಜೆಪಿ ಸಂಸದ ಪಿಸಿ ಮೋಹನ್ ಅವರ ಲಿಖಿತ ಪ್ರಶ್ನೆಗೆ ನ್ಯಾಯ ಮಂಡಳಿ ಮುಂದೆ ಇರುವ ಪ್ರಕರಣದ ವಿವರಗಳನ್ನು ಸಚಿವರು ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ 1,36,064 ಪ್ರಕರಣಗಳಿಗೆ ವಿದೇಶಾಂಗ ನ್ಯಾಯ ಮಂಡಳಿ ತೀರ್ಪು ನೀಡಿದೆ. ಈ ಪೈಕಿ ಕಳೆದ ವರ್ಷ 11,873 ಪ್ರಕರಣಗಳು ಇತ್ಯರ್ಥಗೊಂಡಿವೆ. ನ್ಯಾಯ ಮಂಡಳಿ ಮುಖ್ಯವಾಗಿ ಪೌರತ್ವ ಕಾನೂನಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುತ್ತದೆ.