‘ದೇಶದ ಲಕ್ಷಾಂತರ ನಾಗರಿಕರಿಗೆ ತಮ್ಮ ಮೂಲಭೂತ ಹಕ್ಕುಗಳು ಸಹ ಲಭಿಸುತ್ತಿಲ್ಲ’ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ ರಮಣ

Prasthutha|

ಭಾರತವು ಮಹಾನ್ ಪ್ರಜಾಪ್ರಭುತ್ವ ದೇಶವಾಗಿಯೂ ದೇಶದ ಲಕ್ಷಾಂತರ ಜನರಿಗೆ ಅವರ ಮೂಲಭೂತ ಹಕ್ಕುಗಳು ಕೂಡ ಸಿಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ. ಸ್ವಾತಂತ್ರ್ಯ ಪಡೆದು 74 ವರ್ಷಗಳು ಕಳೆದರೂ ದೇಶ ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳು ಇನ್ನೂ ಬದಲಾಗಿಲ್ಲ ಎಂದು ಅವರು ಹೇಳಿದರು.

- Advertisement -

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 25 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ನ್ಯಾಯಮೂರ್ತಿ ರಮಣ ಮಾತನಾಡುತ್ತಿದ್ದರು. ಎಸ್‌ಎ ಬೋಬ್ಡೇ ನಂತರ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸಲ್ಪಡುವ ವ್ಯಕ್ತಿ ನ್ಯಾಯಮೂರ್ತಿ ಎನ್.‌ವಿ ರಮಣ. ಲಕ್ಷಾಂತರ ನಾಗರಿಕರಿಗೆ ಕಾನೂನು ರಕ್ಷಣೆ ಸಿಗುತ್ತಿಲ್ಲ ಎಂದೂ ಅವರು ಹೇಳಿದರು. ಬಡತನ ಮತ್ತು ನ್ಯಾಯ ನಿರಾಕರಣೆ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಸಮಸ್ಯೆಗಳ ಹೊರತಾಗಿಯೂ, ಆಧುನಿಕ ಭಾರತದ ನಮ್ಮ ಕನಸುಗಳನ್ನು ನಾವು ಅಂತರರಾಷ್ಟ್ರೀಯ ರಂಗದಲ್ಲಿ ಹಂಚಿಕೊಳ್ಳುತ್ತೇವೆ. ನಾಗರಿಕರಿಗೆ ನ್ಯಾಯ ದೊರಕಿಸಲು ವಕೀಲರು ಹೆಚ್ಚು ಶ್ರಮಿಸಬೇಕು ಎಂದು ನ್ಯಾಯಮೂರ್ತಿ ರಮಣ ಹೇಳಿದರು.

Join Whatsapp