ಚಿಕ್ಕಮಗಳೂರು ಶರೀಫ್ ಗಲ್ಲಿಯಲ್ಲಿ ನೀರಿಗೆ ತಾತ್ವಾರ : ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಂತೆ ಆಗ್ರಹಿಸಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಕೆ

Prasthutha|

ಚಿಕ್ಕಮಗಳೂರು ನಗರದ ಮುಖ್ಯ ಭಾಗದಲ್ಲಿ ಇರುವಂತಹ ಶರೀಫ್ ಗಲ್ಲಿ ವಾರ್ಡ್ ಸಂಖ್ಯೆ 17 ರಲ್ಲಿ ಸುಮಾರು ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅಮೃತ ಯೋಜನೆಗೆಂದು ತೋಡಿರುವ ಗುಂಡಿಗಳು ಸರಿಯಾಗಿ ಮುಚ್ಚಿಲ್ಲ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.  ಅಲ್ಲಿನ ಬೋರ್ವೆಲ್ ಮೋಟಾರನ್ನು ದುರಸ್ತಿಗೆಂದು ತೆಗೆದುಕೊಂಡು ಹೋಗಿ ಸುಮಾರು ನಾಲ್ಕು ತಿಂಗಳು ಕಳೆದರೂ  ಮೋಟಾರ್ ಅಳವಡಿಸಿಲ್ಲ ಎನ್ನಲಾಗಿದೆ. ಸ್ಥಳೀಯರು ಈ ಕುರಿತು ಕಾರಣ ಕೇಳಿದರೆ   ನಗರಸಭೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು  ನೀಡುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.  

- Advertisement -

ಶರೀಫ್ ಗಲ್ಲಿ ವಾರ್ಡ್ ಸಂಖ್ಯೆ17 ರ  ನಿವಾಸಿಯಾದ ಮಾಜಿ ನಗರಸಭಾ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿಸಾನ್ ಖೇತ್ ಮಜ್ದೂರ್  ರಾಜ್ಯ ಸಂಚಾಲಕ ಸಿ ಎನ್ ಅಕ್ಮಲ್ ಇವರ ಮನೆಗೆ  ಸ್ಥಳೀಯರು  ಭೇಟಿ ನೀಡಿ  ಸಮಸ್ಯೆಗಳ ಬಗ್ಗೆ  ಮಾಹಿತಿ ನೀಡಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಅಕ್ಮಲ್ ರವರು ವಾರ್ಡಿನ ಎಲ್ಲಾ ಬೋರ್ವೆಲ್ ಗಳು ನಲ್ಲಿಗಳು ಮತ್ತು ಅಮೃತ ಯೋಜನೆಗೆ ತೋಡಿರುವ ಗುಂಡಿಗಳನ್ನು ವೀಕ್ಷಿಸಿದ ನಂತರ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಆದಷ್ಟು ಬೇಗ ನೀರಿನ  ಸಮಸ್ಯೆಯನ್ನು ಬಗೆಹರಿಸುವುದಾಗಿ  ಭರವಸೆ ನೀಡಿದ್ದಾರೆ. ಸ್ಥಳೀಯರಿಗೆ ನೀರನ್ನು ಪೂರೈಸುವಂತೆ ಮತ್ತು ದುರಸ್ತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿ, ಅದೇ ರೀತಿ ಅಮೃತ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ಆಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಕೋರಿ  ನಗರಸಭೆ ಆಯುಕ್ತರಿಗೆ ಸಾರ್ವಜನಿಕರ ಪರವಾಗಿ ಸ್ಥಳೀಯರೊಂದಿಗೆ ತೆರಳಿ ಸಿ.ಎನ್. ಅಕ್ಮಲ್ ರವರು ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಸಾಧಿಕ್, ಫಯಾಜ್,  ಬಾಬು ನೂರಿ ಉಪಸ್ಥಿತರಿದ್ದರು

ವರದಿ : ಇರ್ಫಾನ್ ಚಿಕ್ಕಮಗಳೂರು

Join Whatsapp