ಮೋದಿಗೆ ಧನ್ಯವಾದ ತಿಳಿಸಿ ಎಲಿಜಬೆತ್ ರಾಣಿಯ ಜಾಹಿರಾತು ಫಲಕ । ಸತ್ಯಾಂಶ ಏನು?

Prasthutha|

- Advertisement -

ವಿದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಲಸಿಕೆ ಪೂರೈಸಿದ ಹಿನ್ನಲೆಯಲ್ಲಿ ಮೋದಿಯವರಿಗೆ ರಾಣಿ ಎಲಿಜಬೆತ್ ಧನ್ಯವಾದ ಅರ್ಪಿಸಿದ್ದಾರೆ ಎಂಬಂತೆ ಫೇಸ್‌ಬುಕ್ ಮತ್ತು ಟ್ವಿಟರ್ ಎರಡರಲ್ಲೂ ಒಂದು ಪೋಸ್ಟ್ ವೈರಲ್ ಆಗುತ್ತಿದ್ದು ನಕಲಿ ಸುದ್ದಿ ವಿರೋಧಿ ಸಂಸ್ಥೆಯು ಸತ್ಯಾಂಶ ಹೊರಬಿಟ್ಟಿದೆ.

ಧನ್ಯವಾದ ಟಿಪ್ಪಣಿಯನ್ನು ಲಂಡನ್‌ನ ವಿಶ್ವಪ್ರಸಿದ್ಧ ಪಿಕ್ಕಡಿಲಿ ಸರ್ಕಲ್ ನಲ್ಲಿ ದೈತ್ಯ ಪರದೆಯಲ್ಲಿ ಪ್ರದರ್ಶಿಸಲಾಗಿದೆ ಎಂದು ಕೆಲವರು ಮಾಧ್ಯಮಗಳಲ್ಲಿ ಹಂಚುತ್ತಿದ್ದಾರೆ. ರಾಣಿಯ ಚಿತ್ರದೊಂದಿಗೆ ಪರದೆಯ ಮೇಲೆ “ನಮಗೆ COVID-19 ಲಸಿಕೆಗಳನ್ನು ಕಳುಹಿಸಿದ್ದಕ್ಕಾಗಿ PM ಮೋದಿಗೆ ಧನ್ಯವಾದಗಳು. ನೀವು ಒಳ್ಳೆಯ ಹುಡುಗ” ಎಂದು ಬರೆಯಲಾಗಿದೆ ಎನ್ನಲಾಗಿದೆ. ಇದನ್ನು ಸಾಮಾಜಿಕ ವಲಯಗಳಲ್ಲಿ ಹಂಚುತ್ತಾ “ಮೋದೀಜಿಗೆ ಧನ್ಯವಾದ ಹೇಳುವ ಜಾಹೀರಾತು ಫಲಕವನ್ನು ಎಲಿಜಬೆತ್ ಸ್ಥಾಪಿಸಿದ್ದಾರೆ. ನಮ್ಮನ್ನು ಮತ್ತೆ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಮೋದಿಜಿಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.

- Advertisement -

ವರದಿಗಳ ಪ್ರಕಾರ ಇದು ಏಪ್ರಿಲ್ 7 ರಿಂದ ಏಪ್ರಿಲ್ 19 ರವರೆಗೆ ಲಂಡನ್‌ನ ಪಿಕ್ಕಡಿಲಿ ಲೈಟ್ಸ್ನಲ್ಲಿ ಹಾಕಲಾಗಿದ್ದ ಸಂದೇಶವನ್ನು ಎಡಿಟ್ ಮಾಡಲಾಗಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದೆ. ರಾಣಿಯ ಅಂದಿನ ಸಂದೇಶವನ್ನು ಏಪ್ರಿಲ್ 8, 2020 ರಂದು ಬಿಬಿಸಿ ಲಂಡನ್ ಕೂಡ ಟ್ವೀಟ್ ಮಾಡಿತ್ತು ಎಂದು ತಿಳಿದುಬಂದಿದೆ.



Join Whatsapp